ಅಂಗಡಿ ಮುಚ್ಚಿದ ಪ್ರಕರಣ; ದ್ವೇಷ ಬಿತ್ತುವ ಸಮಾಜಕ್ಕೆ ಪ್ರೀತಿ ನೀಡುವವರೇ ಕಾಂಗ್ರೆಸಿಗರು: ರಮಾನಾಥ ರೈ

Prasthutha|

►ಪಂಜದಲ್ಲಿ ಬಿಜೆಪಿ ಪ್ರತಿಭಟನೆ ವಿರುದ್ಧ ಕಾಂಗ್ರೆಸ್ ‘ಸತ್ಯ ದರ್ಶನ ಸಭೆ’

- Advertisement -

ಪಂಜ: ಬಿಜೆಪಿಯವರು ದ್ವೇಷ ಬಿತ್ತುವ ಕೆಲಸ ಮಾಡಿದರೆ ಸಮಾಜಕ್ಕೆ ಪ್ರೀತಿ ಬಿತ್ತುವ ಕೆಲಸ ಮಾಡೋಣ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.


ಸ್ಟೇಟಸ್ ವಿಚಾರಕ್ಕೆ ಅಂಗಡಿ ಮುಚ್ಚಿದ್ದನ್ನು ಕಾಂಗ್ರೆಸ್ ದಬ್ಬಾಳಿಕೆಯೆಂದು ಆರೋಪಿಸಿ ಬಿಜೆಪಿಯು ಜು. 8ರಂದು ಪಂಜದಲ್ಲಿ ನಡೆಸಿದ ಪ್ರತಿಭಟನೆಗೆ ವಿರುದ್ಧವಾಗಿ ” ಬಿಜೆಪಿ ಸುಳ್ಳಿನ ವಿರುದ್ಧ ಕಾಂಗ್ರೆಸ್ ಸತ್ಯ ದರ್ಶನ ” ಎಂಬ ಸಭೆಯನ್ನು ಪಂಜದಲ್ಲಿ ಆಯೋಜಿಸಲಾಯಿತು.

- Advertisement -


ಈ ವೇಳೆ ಮಾತನಾಡಿದ ರಮಾನಾಥ ರೈ, ಊರಿನಲ್ಲಿ ಬಿಜೆಪಿ ಹಚ್ಚಿದ ದ್ವೇಷವನ್ನು ಶಮನ ಮಾಡಲು ನಾವು ಬಂದಿದ್ದೇವೆ. ತಪ್ಪು ಮಾಡಿದ ವೆಂಕಪ್ಪರನ್ನು ಸಮರ್ಥಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ಖಂಡನೀಯ. ಬಿಜೆಪಿಯವರು ಧರ್ಮ ದ್ವೇಷದ ಅಮಲಿನಲ್ಲಿ ಏನು ಮಾಡುತ್ತಾರೆಂದು ಅವರಿಗೇ ಗೊತ್ತಿಲ್ಲ. ಆದರೆ ನಮ್ಮ ಉದ್ದೇಶ ಸಾಮರಸ್ಯ ಬೆಳೆಸುವುದು. ಹಿಂದಿನಿಂದ ಬ್ಯಾರಿಗೆ ಹುಟ್ಟಿದವರೆಂದು ಹೇಳುವುದನ್ನು ನಾವು ಕೇಳಿ ಸುಮ್ಮನಾಗುತ್ತೇವೆ. ಆದರೆ ಇದು ಅಧಿಕೃತವಾಗಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ ಎಂದರೆ ಇದು ಘನಘೋರ ಅಪರಾಧ. ಇಂಥ ಸ್ಟೇಟಸ್ ಇಡೀ ಮಹಿಳಾ ಕುಲಕ್ಕೆ, ಹಿಂದೂ ಸಮಾಜಕ್ಕೆ ಮಾಡಿದ ಅವಹೇಳನ. ಇದನ್ನು ತಪ್ಪು ಎಂದು ತಿದ್ದಬೇಕಾದವರೇ ಅವರನ್ನು ಬೆಂಬಲಿಸಿ ಪ್ರತಿಭಟನೆ ಮಾಡಿ ನಮ್ಮವರಿಗೆ ಧಿಕ್ಕಾರ ಹಾಕ್ತಾರೆ ಎಂದಾದರೆ ನಾವು ಇದನ್ನು ಖಂಡಿಸಲೇಬೇಕು. ಅವರು ದ್ವೇಷ ಬಿತ್ತುವ ಕೆಲಸ ಮಾಡಿದರೆ ಸಮಾಜಕ್ಕೆ ಪ್ರೀತಿ ಬಿತ್ತುವ ಕೆಲಸ ಮಾಡೋಣ ಎಂದರು.


ವೇದಿಕೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪಂಜ ವಲಯ ಕಾಂಗ್ರೆಸ್ ಅಧ್ಯಕ್ಷ ಕೇಶವ ಕುದ್ವ ಉಪಸ್ಥಿತರಿದ್ದರೆ ಸುಳ್ಯ ಮತ್ತು ಕಡಬ ಬ್ಲಾಕ್ ಗಳ ಬಹುತೇಕ ಪ್ರಮುಖ ನಾಯಕರು ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

Join Whatsapp
Exit mobile version