Home ಟಾಪ್ ಸುದ್ದಿಗಳು ಮಂಗಳೂರು: ನಕಲಿ RAW ಅಧಿಕಾರಿ ಅರೆಸ್ಟ್

ಮಂಗಳೂರು: ನಕಲಿ RAW ಅಧಿಕಾರಿ ಅರೆಸ್ಟ್

ಮಂಗಳೂರು: ನಕಲಿ RAW ಅಧಿಕಾರಿ ಎಂದು ನಂಬಿಸಿ ವಂಚಿಸಲೆತ್ನಿಸುತ್ತಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಯನ್ನು ಉರ್ವ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.


ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿಯಾಗಿರುವ ಕೇರಳದ ಇಡುಕ್ಕಿ ಮೂಲದ ಬೆನೆಡಿಕ್ಟ್ ಸಾಬು (24) ಎಂಬಾತನೇ ಈ ರೀತಿ ವಂಚನೆ ಮಾಡಿ ಬಂಧನಕ್ಕೆ ಒಳಗಾದವನು. ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನನಲ್ಲಿ ವಿದ್ಯಾರ್ಥಿಯಾಗಿರುವ ಈತ 6 ತಿಂಗಳ ಹಿಂದಷ್ಟೇ ನರ್ಸಿಂಗ್ ಕಾಲೇಜಿನ ಜಿಎನ್ ಎಂ ಕೋರ್ಸ್ ಗೆ ಸೇರಿದ್ದ ಎಂದು ತಿಳಿದು ಬಂದಿದೆ.

ಬೆನೆಡಿಕ್ಟ್ ಸಾಬುನಿಂದ ಕೇರಳದ ‘ರಾ’ ಅಧಿಕಾರಿ ಮತ್ತು ಅಗ್ರಿಕಲ್ಚರ್ ಹಾಗೂ ಫಾರ್ಮರ್ಸ್ ವೆಲ್ಫೇರ್ ಡಿಪಾರ್ಟೆಂಟ್ಮೆಂಟ್ ಎಂಬ 380 ಐಡಿ ಕಾರ್ಡ್ ಗಳನ್ನು ಹಾಗೂ ಒಂದು ಜೊತೆ ಪಿಎಸ್ಸೈ ಪೊಲೀಸ್ ಸಮವಸ್ತ್ರ, ಪೊಲೀಸ್ ಶೂಸ್, ಲೋಗೋ, ಮೆಡಲ್, ಬೆಲ್ಟ್, ಕ್ಯಾಪ್, 1 ಲ್ಯಾಪ್ ಟಾಪ್ ಮತ್ತು 2 ಮೊಬೈಲ್ ಸೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Join Whatsapp
Exit mobile version