Home ಟಾಪ್ ಸುದ್ದಿಗಳು ಸನ್ನಿ ಡಿಯೋಲ್ ಮನೆ ಹರಾಜನ್ನು ಹಿಂಪಡೆದ ಬ್ಯಾಂಕ್

ಸನ್ನಿ ಡಿಯೋಲ್ ಮನೆ ಹರಾಜನ್ನು ಹಿಂಪಡೆದ ಬ್ಯಾಂಕ್

ನವದೆಹಲಿ: ನಟ, ಸಂಸದ ಸನ್ನಿ ಡಿಯೋಲ್ ಅವರು 56 ಕೋಟಿ ರೂಪಾಯಿ ಸಾಲ ಹಿಂದಿರುಗಿಸದ ಕಾರಣ ಅವರ ಒಡೆತನದ ಬಂಗಲೆಯನ್ನು ಬ್ಯಾಂಕ್ ಆಫ್ ಬರೋಡಾದವರು ಹರಾಜಿಗೆ ಇಟ್ಟಿದ್ದರು. ಈಗ ಇದನ್ನು ಹಿಂಪಡೆಯಲಾಗಿದೆ.


ಇದಕ್ಕೆ ತಾಂತ್ರಿಕ ಸಮಸ್ಯೆಯ ಕಾರಣವನ್ನು ಬ್ಯಾಂಕ್ ನೀಡಿದೆ. ಈ ಬೆಳವಣಿಗೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.


ಸನ್ನಿ ಡಿಯೋಲ್ 2016ರಲ್ಲಿ ‘ಘಾಯಲ್ ಒನ್ಸ್ ಅಗೇನ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿತ್ತು. ಈ ಚಿತ್ರವನ್ನು ಅವರ ತಂದೆ ಧರ್ಮೇಂದ್ರ ನಿರ್ಮಾಣ ಮಾಡಿದ್ದರು. ಈ ಚಿತ್ರ ನಿರ್ಮಾಣಕ್ಕೆ ಅವರು ಈ ಬಂಗಲೆಯನ್ನು ಅಡ ಇಟ್ಟಿದ್ದರು ಎನ್ನಲಾಗಿದೆ. ಸದ್ಯ ಹರಾಜು ಪ್ರಕ್ರಿಯೆ ನಿಂತಿರುವ ವಿಚಾರದ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.

Join Whatsapp
Exit mobile version