Home ಕರಾವಳಿ ಮಂಗಳೂರು: ಫ್ರಿಡ್ಜ್ ಸ್ಪರ್ಶಿಸಿದ ಮಗು ಮೃತ್ಯು!

ಮಂಗಳೂರು: ಫ್ರಿಡ್ಜ್ ಸ್ಪರ್ಶಿಸಿದ ಮಗು ಮೃತ್ಯು!

ಬೆಳ್ಳಾರೆ: ಮನೆಯ ಫ್ರಿಡ್ಜ್ ಸ್ಪರ್ಶಿಸಿದ ಮಗುವೊಂದು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯದ ಐವರ್ನಾಡು ಎಂಬಲ್ಲಿ ನಡೆದಿದೆ.
ನಾಲ್ಕು ವರ್ಷದ ಆದಿಲ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.


ಬಾಲಕ ಮನೆಯಲ್ಲಿ ಫ್ರಿಡ್ಜ್ ಮುಟ್ಟಿದ್ದಾಗ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಐವರ್ನಾಡಿನ ಕೈವಲ್ತಡ್ಕ ಆದಂ ಎಂಬವರ ಪುತ್ರಿ ಅಪ್ಸ ಹಾಗೂ ಹೈದರಾಲಿ ರವರ ಪುತ್ರ ಆದಿಲ್ ಮೃತಪಟ್ಟ ಬಾಲಕ.

ಮೂಲತ ಪುತ್ತೂರು ತಾಲೂಕಿನ ಕುಂಬ್ರ ದಲ್ಲಿ ತನ್ನ ತಂದೆ ತಾಯಿಯೊಂದಿಗೆ ವಾಸಿಸುತ್ತಿದ್ದ ಆದಿಲ್ ಐವರ್ನಾಡಿನ ತನ್ನ ಅಜ್ಜನ ಮನೆಗೆ ಬಂದಿದ್ದ.

ಬಾಲಕನ ಸಹೋದರ ಅಫ್ರಾಜ್ ಐವರ್ನಾಡಿನಲ್ಲಿ ತನ್ನ ಅಜ್ಜನ ಮನೆಯಲ್ಲಿ ಇದ್ದು ಸರ್ಕಾರಿ ಶಾಲೆಯಲ್ಲಿ ಎರಡನೆಯ ತರಗತಿ ವಿದ್ಯಾರ್ಥಿಯಾಗಿದ್ದ. ಈ ಕಾರಣದಿಂದ ಆದಿಲ್ ತಂದೆ ತಾಯಿ ಯೊಂದಿಗೆ ಆಗಾಗ ಐವರ್ನಾಡಿಗೆ ಬರುತ್ತಿದ್ದ.

ಅಪರಾಹ್ನ ಎರಡು ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು ಶಾಕ್ ನಿಂದ ಗಂಭೀರವಾಗಿದ್ದ ಆದಿಲ್ ನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಪ್ರಾಣ ಕಳೆದುಕೊಂಡಿದ್ದ.

ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version