Home ಕರಾವಳಿ ಮಂಗಳೂರು: ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಕೆಳಗೆ ಬಿದ್ದು ಎಸಿ ಟೆಕ್ನೀಶಿಯನ್ ಮೃತ್ಯು

ಮಂಗಳೂರು: ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಕೆಳಗೆ ಬಿದ್ದು ಎಸಿ ಟೆಕ್ನೀಶಿಯನ್ ಮೃತ್ಯು

ಮಂಗಳೂರು: ಅಪಾರ್ಟ್‌ಮೆಂಟ್‌ನ ಮಹಡಿಯಿಂದ ಕೆಳಗೆ ಬಿದ್ದು ಎಸಿ ಟೆಕ್ನೀಶಿಯನ್ ದಾರುಣವಾಗಿ ಮೃತಪಟ್ಟ ಘಟನೆ ಇಂದು(ಬುಧವಾರ) ಸಂಜೆ ನಂತೂರಿನಲ್ಲಿ ನಡೆದಿದೆ.

ವಿನಯ್ ಜೋಯೆಲ್ ತಾವ್ರೋ (22) ಮೃತಪಟ್ಟ ಎಸಿ ಟೆಕ್ನೀಶಿಯನ್.

ವಿನಯ್ ಜೋಯೆಲ್ ತಾವ್ರೋ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಅಪಾರ್ಟ್‌ಮೆಂಟ್‌ನಿಂದ ಬಿದ್ದು ಮೃತಪಟ್ಟಿದ್ದಾರೆ.

ಸಂಜೆ ಸುಮಾರು 5.58ರ ವೇಳೆಗೆ ನಂತೂರು ಬಳಿಯಿರುವ ಮೌಂಟ್ ಟಿಯರಾ ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯ ಕಿಟಕಿಯಿಂದ ಹೊರಬಂದು ಸ್ಕ್ರೂ ಹಾಕುವಾಗ ಅಚಾನಕವಾಗಿ ಆಯತಪ್ಪಿ ಬಿದ್ದು ವಿನಯ್ ಜೋಯೆಲ್ ತಾವ್ರೋ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತದೇಹವನ್ನು ಎ ಜೆ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತನ ಮನೆಯವರು ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು

Join Whatsapp
Exit mobile version