Home ಜಾಲತಾಣದಿಂದ ರಾಜ್ಯದಲ್ಲಿ ಈ ಬಾರಿ ಸಂಪೂರ್ಣ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ: ಎಬಿಪಿ ಸಿ- ವೋಟರ್ ಸಮೀಕ್ಷೆ

ರಾಜ್ಯದಲ್ಲಿ ಈ ಬಾರಿ ಸಂಪೂರ್ಣ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ: ಎಬಿಪಿ ಸಿ- ವೋಟರ್ ಸಮೀಕ್ಷೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ಎಬಿಪಿ ಸಿ- ವೋಟರ್ ಸಮೀಕ್ಷೆ ಪಟ್ಟಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ.

ಎಬಿಪಿ ಸಿ- ವೋಟರ್ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ 115-127 ಸೀಟ್ ಬರುವ ನಿರೀಕ್ಷೆಯಿದೆ. ಅದೇ ರೀತಿ ಬಿಜೆಪಿಗೆ 68-80, ಜೆಡಿಎಸ್‍ಗೆ 23-35 ಹಾಗೂ ಇತರೆ 0-02 ಸೀಟ್ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ಝೀ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಈ ಬಾರಿ ರಾಜ್ಯದಲ್ಲಿ ಯಾರಿಗೂ ಬಹುಮತವಿಲ್ಲ ಎಂದು ತಿಳಿಸಿದೆ.

ಝೀ ನ್ಯೂಸ್‍ನ ಸಮೀಕ್ಷೆಯ ಪ್ರಕಾರ, ಬಿಜೆಪಿ 96 -106 ಸೀಟ್ ಪಡೆದರೆ, ಕಾಂಗ್ರೆಸ್ 88-98 ಸೀಟ್, ಜೆಡಿಎಸ್ – 23-33 ಹಾಗೂ ಇತರೆ 02-07 ಸೀಟ್ ಪಡೆಯುವ ಸಾಧ್ಯತೆಯಿದೆ.

Join Whatsapp
Exit mobile version