Home ಕರಾವಳಿ ಮಂಗಳೂರಿನಲ್ಲಿ ಭಾರಿ ಮಳೆ: ಪಿಲಿಕುಳ ಜೈವಿಕ ಉದ್ಯಾನಕ್ಕೆ ನುಗ್ಗಿದ ನೀರು

ಮಂಗಳೂರಿನಲ್ಲಿ ಭಾರಿ ಮಳೆ: ಪಿಲಿಕುಳ ಜೈವಿಕ ಉದ್ಯಾನಕ್ಕೆ ನುಗ್ಗಿದ ನೀರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಸಿ ತಾಣವಾದ ಪಿಲಿಕುಳ ಮೃಗಾಲಯಕ್ಕೆ ಭಾರಿ ಪ್ರಮಾಣದ ನೀರು ನುಗ್ಗಿದೆ.

ಪಿಲಿಕುಳ ಜೈವಿಕ ಉದ್ಯಾನಕ್ಕೆ ನೀರು ನುಗ್ಗಿದ್ದು, ಪ್ರಾಣಿಗಳ ವಾಸ್ತವ್ಯಕ್ಕೂ ಕಷ್ಟವಾಗಿದೆ.

ಇದೇ ಮೊದಲ ಬಾರಿಗೆ ನೀರು ಒಳನುಗ್ಗಿದೆ. ಸದ್ಯ ಪ್ರವಾಸಿಗರಿಗೆ ಪಿಲಿಕುಳ ಮೃಗಾಲಯಕ್ಕೆ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

Join Whatsapp
Exit mobile version