Home ಕರಾವಳಿ ಕಸ ವಿಂಗಡಿಸುವ ಪಾಲಿಕೆ ಕ್ರಮದಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ : SDPI

ಕಸ ವಿಂಗಡಿಸುವ ಪಾಲಿಕೆ ಕ್ರಮದಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ : SDPI

ಮಂಗಳೂರು: ಮ.ನ.ಪಾ ನಗರದ ಪ್ರತೀ ಮನೆಗಳಲ್ಲಿ ದಿನಂಪ್ರತಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಹಸಿ ಕಸ ಮತ್ತು ಒಣ ಕಸ ಎಂಬುದಾಗಿ ಪ್ರತ್ಯೇಕ ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿಗೊಳಿಸುತ್ತಿರುವುದರಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಖಾಸಗಿ ಕಂಪನಿಗಳ ಲಾಭಕ್ಕಾಗಿ ಜನರ ರಕ್ತ ಹೀರುತ್ತಿದೆ ಎಂದು ದಕ್ಷಿಣ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸುಹೈಲ್ ಖಾನ್ ಫಳ್ನೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಶುಕ್ರವಾರ ಒಣಕಸಗಳನ್ನು ಮಾತ್ರ ಸಂಗ್ರಹಿಸಿ ಹಸಿಕಸವನ್ನು ಮನೆಗಳಲ್ಲಿಯೇ ಕೊಳೆಯಲು ಬಿಟ್ಟು ಹೋಗಲಾಗುತ್ತಿದೆ. ಇದರಿಂದ ಮನೆ ಮಂದಿ ಗಬ್ಬುನಾತವನ್ನೂ ಅನುಭವಿಸಬೇಕಾಗುತ್ತದೆ. ಅಲ್ಲದೆ ಸ್ವಚ್ಚತೆಯ ಸಮಸ್ಯೆ ಎದುರಾಗಿ ಇದೀಗಾಗಲೇ ನಗರವನ್ನು ಕಾಡುತ್ತಿರುವ ಮಲೇರಿಯಾ, ಡೆಂಗುವಿನಂತಹ ಮಾರಕ ರೋಗ ಹೆಚ್ಚಾಗಿ ಇಲ್ಲಿನ ಜನ ಇನ್ನಷ್ಟು ತೊಂದರೆಗೊಳಗಾಗುವ ಸಾಧ್ಯತೆ ಇದೆ.

ಒಂದೆಡೆ ಕೊರೋನದ ಹಾವಳಿ ಇನ್ನೊಂದೆಡೆ ಡೆಂಗ್ಯು ವಿನಂತಹ ಮಾರಕ ರೋಗದಿಂದ ಜಿಲ್ಲೆಯ ತೀವ್ರ ಸಂಕಷ್ಟದಲ್ಲಿರುವಾಗ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಆದುದರಿಂದ ಕಸ ಸಂಗ್ರಹದಲ್ಲಿ ಈ ವಿಂಗಡಣೆಯ ವಿಧಾನವನ್ನು ಬಿಟ್ಟು ಒಟ್ಟು ಸಂಗ್ರಹವಾಗುವ ಕಸ ಪ್ರತಿದಿನವೂ ವಿಲೇವಾರಿಗೊಳಿಸುವ ಅಗತ್ಯವಿದೆ ಮ.ನ.ಪಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Join Whatsapp
Exit mobile version