Home ಕರಾವಳಿ ಮಂಗಳೂರು ವಿವಿಯಲ್ಲಿ ಕ್ಯಾಂಪಸ್ ಫ್ರಂಟ್ ನಿಂದ ಗೌರಿ ಸ್ಮರಣೆ

ಮಂಗಳೂರು ವಿವಿಯಲ್ಲಿ ಕ್ಯಾಂಪಸ್ ಫ್ರಂಟ್ ನಿಂದ ಗೌರಿ ಸ್ಮರಣೆ

ಮಂಗಳೂರು: ಪ್ರಗತಿಪರ ಚಿಂತಕಿ, ಪತ್ರಕರ್ತೆ ಹಾಗೂ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶರನ್ನು ಸಂಘಪರಿವಾರದ ಕಿರಾತಕರು ಗುಂಡಿಕ್ಕಿ ಹತ್ಯೆಗೈದ ದಿನವಾದ ಸೆಪ್ಟೆಂಬರ್ 5 ನ್ನು ನೆನಪಿಸುತ್ತಾ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಘಟಕದ ವತಿಯಿಂದ ವಿವಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯು ಜರುಗಿತು.


ದೇಶದಲ್ಲಿ ಪ್ರಭುತ್ವದ ವಿರುದ್ಧ, ಮನುವಾದಿ ಸಿದ್ಧಾಂತದ ವಿರುದ್ಧ ಧ್ವನಿಯೆತ್ತುವವರನ್ನು ಗುರಿಯಾಗಿಸಿಕೊಂಡು ಜೈಲಿಗಟ್ಟುವ ಮುಖಾಂತರ, ಹತ್ಯೆಗೈಯ್ಯುವ ಮುಖಾಂತರ ಆರ್ ಎಸ್ ಎಸ್ ಭಯೋತ್ಪಾದನೆಯಲ್ಲಿ ತೊಡಗಿದೆ. ಇವರ ಭಯೋತ್ಪಾದನೆಗೆ ದಾಬೋಲ್ಕಾರ್, ಪನ್ಸಾರೆ, ಕಲಬುರುಗಿ ಹಾಗೂ ಗೌರಿ ಲಂಕೇಶ್ ರಂತಹ ಹೋರಾಟಗಾರರು, ಚಿಂತಕರು ಬಲಿಯಾಗಿದ್ದು, ಆದರೆ ಅವರ ಜೀವ ಮಾತ್ರ ಕಣ್ಮರೆ ಯಾಗಿದೆಯೇ ಹೊರತು ಅವರು ಸಿದ್ಧಾಂತಗಳು ಇಂದೂ ಅಚ್ಚಲಿಯದೇ ನಮ್ಮಲ್ಲಿ ಉಳಿದಿವೆ. ಹತ್ಯೆ, ಜೈಲುಗಳನ್ನು ತೋರಿಸಿ ಈ ಫ್ಯಾಶಿಷ್ಟ್ ವಿರೋಧಿ ಹೋರಾಟವನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಹೇಳಿದರು.


ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ರಿಯಾಝ್, ಮಂಗಳೂರು ವಿವಿ ಮುಖಂಡರಾದ ಮುಖ್ತಾರ್, ಮುನೀರ್, ಆಶಿಕ್ ಉಪಸ್ಥಿತರಿದ್ದರು.

Join Whatsapp
Exit mobile version