Home ಕರಾವಳಿ ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ 2 ಮೀನುಗಳು

ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ 2 ಮೀನುಗಳು

ಮಂಗಳೂರು: ಮೀನುಗಾರರ ಬಲೆಗೆ ಅಪರೂಪದ ಹಾರುವ 2 ಮೀನುಗಳು ಬಿದ್ದಿವೆ.

ಎರಡು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳೂ ಸಿಕ್ಕಿವೆ ಎಂದು ಮೀನುಗಾರ ಲೋಕೇಶ್ ಬೆಂಗ್ರೆ ಮಾಹಿತಿ ನೀಡಿದ್ದಾರೆ.

ಆಂಗ್ಲ ಭಾಷೆಯಲ್ಲಿ ಫ್ಲೆಯಿಂಗ್ ಫಿಶ್ ಹಾಗೂ ತುಳುವಲ್ಲಿ ಪಕ್ಕಿಮೀನ್ ಎಂದು ಇವನ್ನು ಕರೆಯುತ್ತಾರೆ. ಹಾರುವ ಮೀನು ಹೆಚ್ಚಾಗಿ ಆಳಸಮುದ್ರದಲ್ಲಿರುವಂಥ ಮತ್ಸ್ಯ ಪ್ರಭೇದ. ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ. ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲೆ ಎಗರಿ ಕೆಲ ಹೊತ್ತು ಹಕ್ಕಿಗಳಂತೆಯೇ ಹಾರುವ ಸಾಮರ್ಥ್ಯ ಹೊಂದಿವೆ.

15ರಿಂದ 45 ಸೆಂ.ಮೀ.ವರೆಗೆ ಉದ್ದವಾಗುವ ಈ ಮೀನುಗಳು ಬಲೆಗೆ ಬೀಳುವುದು ಅಪರೂಪ. ಇತರ ಮೀನುಗಳಿಗೆ ಹೋಲಿಸಿದರೆ ಹಾರುವ ಮೀನುಗಳು ಹೆಚ್ಚು ರುಚಿಕರವಾಗಿರುತ್ತದೆ. ಆದರೆ, ಅದನ್ನೇ ಹಿಡಿಯುವ ಕ್ರಮ ಈ ಭಾಗದಲ್ಲಿ ಕಡಿಮೆ ಎನ್ನುತ್ತಾರೆ ಮೀನುಗಾರ ಲೋಕೇಶ್ ಬೆಂಗ್ರೆ..

Join Whatsapp
Exit mobile version