ಮಂಗಳೂರು: ಪದ್ಮಶ್ರೀ ಪುರಸ್ಕೃತ ಸುಪ್ರಸಿದ್ಧ ಜನಪದ ಗಾಯಕಿ ಸುಕ್ರಿ ಬೊಮ್ಮಗೌಡ ಉಸಿರಾಟದ ತೊಂದರೆಯಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಲಗಳ ಪ್ರಕಾರ ಸುಕ್ರಿ ಬೊಮ್ಮಗೌಡ ಅವರು ಐಸಿಯುನಲ್ಲಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದರೆ ನಾಳೆ 11 ಗಂಟೆಗೆ ಅವರ ದೇಹಸ್ಥಿತಿಯನ್ನು ಗಮನಿಸಿ ಆ್ಯಂಜಿಯೊಗ್ರಾಫಿ ಮಾಡುವುದೋ, ಇಲ್ಲವೋ ಎಂದು ವೈದ್ಯರು ನಿರ್ಧರಿಸಲಿದ್ದಾರೆ.
3-4 ತಿಂಗಳಿನಿಂದ 86 ವರ್ಷಗಳ ಸುಕ್ರಿ ಬೊಮ್ಮಗೌಡ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೃತಕ ಉಸಿರಾಟದ ಉಪಕರಣದ ಉಪಯೋಗದಲ್ಲಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಈ ಕೃತಕ ಉಸಿರಾಟ ಉಪಕರಣ ಇದ್ದಾಗ್ಯೂ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.