Home ಕರಾವಳಿ ಮಂಗಳೂರು: ಕರ್ಕಶ ಹಾರ್ನ್ ವಿರುದ್ಧ ಕಾರ್ಯಾಚರಣೆ| 167 ಪ್ರಕರಣ ದಾಖಲು

ಮಂಗಳೂರು: ಕರ್ಕಶ ಹಾರ್ನ್ ವಿರುದ್ಧ ಕಾರ್ಯಾಚರಣೆ| 167 ಪ್ರಕರಣ ದಾಖಲು

ಮಂಗಳೂರು: ನಗರದ ವಿವಿಧ ಬಸ್ ಗಳಿಂದ ಕರ್ಕಶ ಹಾರ್ನ್ ಗೆ ಸಂಬಂಧಿಸಿದ ಉಪಕರಣಗಳನ್ನು ಟ್ರಾಫಿಕ್ ಪೊಲೀಸರು ತೆರವುಗೊಳಿಸಿದ್ದಾರೆ.

ತಪಾಸಣೆ ವೇಳೆ ಕರ್ಕಶ ಹಾರ್ನ್ ಬಳಕೆ ಮಾಡುತ್ತಿದ್ದ ವಾಹನಗಳ ಮೇಲೆ ಕೇಸು ದಾಖಲಿಸಲಾಗಿದ್ದು, ಒಂದೇ ದಿನದಲ್ಲಿ 167 ಪ್ರಕರಣ ದಾಖಲಾಗಿದೆ. 83500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ನಗರದ ಖಾಸಗಿ ಬಸ್ಸುಗಳಲ್ಲಿ ಕರ್ಕಶ ಹಾರ್ನ್ ‌ಹೆಚ್ಚಾಗಿ ಬಳಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಎಸಿಪಿ ನಟರಾಜ್ ಮತ್ತು ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.

Join Whatsapp
Exit mobile version