ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ನಗರದಲ್ಲಿ ಸಕಲ ಸಿದ್ಧತೆ ನಡೆದಿದೆ.
ಪ್ರಧಾನಿ ಮೋದಿ ನಡೆಸಲಿರುವ ರೋಡ್ ಶೋ ಗೆ ಕ್ಷಣ ಗಣನೆಯೂ ಆರಂಭ ಆಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಲಿರುವ ಪ್ರಧಾನಿ ಅಲ್ಲಿಂದ ವಿಶೇಷ ವಾಹನದ ಮೂಲಕ ಲೇಡಿ ಹಿಲ್ ನ ನಾರಾಯಣ ಗುರು ಸರ್ಕಲ್ ಗೆ ರಾತ್ರಿ 7.45ಕ್ಕೆ ಆಗಮಿಸಲಿದ್ದಾರೆ. ಅಲ್ಲಿ ನಾರಾಯಣ ಗುರು ಮೂರ್ತಿಗೆ ಮಾಲಾರ್ಪಣೆ ಮಾಡಿ ರೋಡ್ ಶೋ ನ ವಿಶೇಷ ವಾಹನ ಏರಲಿದ್ದಾರೆ