Home ಕರಾವಳಿ ಮಂಗಳೂರು | ಜ್ಯೋತಿ ಚಿತ್ರಮಂದಿರ ನೆಲಸಮ: ಚಿತ್ರ ಪ್ರೇಮಿಗಳಿಗೆ ಇನ್ನು ನೆನಪು ಮಾತ್ರ

ಮಂಗಳೂರು | ಜ್ಯೋತಿ ಚಿತ್ರಮಂದಿರ ನೆಲಸಮ: ಚಿತ್ರ ಪ್ರೇಮಿಗಳಿಗೆ ಇನ್ನು ನೆನಪು ಮಾತ್ರ

ಮಂಗಳೂರು: ಕಳೆದ ಐದು ದಶಕಗಳಿಂದ ಚಿತ್ರಪ್ರೇಮಿಗಳ ನೆಚ್ಚಿನ ತಾಣವಾಗಿದ್ದ ಮಂಗಳೂರಿನ ಜ್ಯೋತಿ ಚಿತ್ರಮಂದಿರದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಮಂಗಳೂರಿನ ಪ್ರಮುಖ ಸರ್ಕಲ್ ಗಳಲ್ಲಿ ಜ್ಯೋತಿ ಸರ್ಕಲ್ ಒಂದು. ಈ ಸರ್ಕಲ್ ಗೆ ಜ್ಯೋತಿ ಎಂಬ ಹೆಸರು ಬರಲು ಕಾರಣ ಈ ಚಿತ್ರಮಂದಿರ. ಈ ಕಾರಣದಿಂದಲೇ ಸರ್ಕಾರಿ‌ ದಾಖಲೆಗಳಲ್ಲಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ವೃತ್ತವು ಜ್ಯೋತಿ ಸರ್ಕಲ್ ಎಂದು ಪ್ರಸಿದ್ಧವಾಗಿದೆ.

ಈ ಸಿನಿಮಾಮಂದಿರವನ್ನು ಕೆಡವಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲು ಹಲವು ವರ್ಷಗಳ ಹಿಂದೆ ನಿರ್ಧರಿಸಲಾಗಿತ್ತು. ಮುಂಬೈನ ಬಿಲ್ಡರ್ರೊಬ್ಬರ ಸಹಭಾಗಿತ್ವದಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

Join Whatsapp
Exit mobile version