ಮಂಗಳೂರು : ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ 50 ಸ್ಥಾನಗಳ ಪಟ್ಟಿಯಲ್ಲಿ 2019-20ರಲ್ಲಿ 29 ನೇ ರ್ಯಾಂಕ್ ಪಡೆದಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅದಾನಿ ಗ್ರೂಪ್ ಆಫ್ ಕಂಪೆನಿ ತೆಕ್ಕೆಗೆ ಪಡೆದ ನಂತರ 2020-21ನೇ ಸಾಲಿನಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ 31 ನೇ ಸ್ಥಾನಕ್ಕೆ ಕುಸಿದಿದೆ. 2019-20ರಲ್ಲಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಾರ್ಷಿಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇರಿ ಒಟ್ಟಾರೆ 18,76,294 ಪ್ರಯಾಣಿಕರ ನಿರ್ವಹಣೆಯಾಗಿತ್ತು. ಈ ಸಂಖ್ಯೆ 2020-21ನೇ ಸಾಲಿನಲ್ಲಿ ಶೇ.67.2ರಷ್ಟು ಕುಸಿತ ಕಂಡು, ಕೇವಲ 6,14,845 ಪ್ರಯಾಣಿಕರ ನಿರ್ವಹಣೆ ಆಗಿತ್ತು. ಒಟ್ಟು ಪ್ರಯಾಣಿಕರ ನಿರ್ವಹಣೆಯಲ್ಲಿ 2019-20ರಲ್ಲಿ29ನೇ ರಾರಯಂಕ್ನಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣ ಈಗ ಎರಡು ಸ್ಥಾನಕ್ಕೆ ಕುಸಿದು 31ನೇ ಸ್ಥಾನಕ್ಕೆ ಇಳಿದಿದೆ.
2020-21ನೇ ಸಾಲಿನಲ್ಲಿ 1,52,434 ಅಂತಾರಾಷ್ಟ್ರೀಯ ಪ್ರಯಾಣಿಕರು ಸಂಚರಿಸಿದ್ದು, ಶೇ.73.3ರಷ್ಟು ಕುಸಿತ ದಾಖಲಿಸಿತ್ತು. 2019-20ರಲ್ಲಿ ಒಟ್ಟು 5,71,226 ಪ್ರಯಾಣಿಕರ ನಿರ್ವಹಣೆಯಾಗಿತ್ತು. ಇದೇ ಅವಧಿಯಲ್ಲಿ 4,62,411 ದೇಶೀಯ ಪ್ರಯಾಣಿಕರ ನಿರ್ವಹಣೆಯಾಗಿದ್ದು, ಶೇ.75.9ರಷ್ಟು ಕುಸಿತ ದಾಖಲಾಗಿದೆ. 2019-20ರಲ್ಲಿ ಒಟ್ಟು 13,05,068 ಪ್ರಯಾಣಿಕರ ನಿರ್ವಹಣೆಯಾಗಿತ್ತು. 2020-21ರಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಎರಡೂ ವರ್ಗದಲ್ಲಿಒಟ್ಟು 6,14,845 ಪ್ರಯಾಣಿಕರ ನಿರ್ವಹಣೆಯಾಗಿದೆ. 2019-20ರಲ್ಲಿ ಈ ಸಂಖ್ಯೆ 18,76,294 ಆಗಿತ್ತು.
ಲಾಕ್ಡೌನ್ನ ದುಷ್ಪರಿಣಾಮಗಳು ಮತ್ತು ಪ್ರಯಾಣಿಕರೊಂದಿಗೆ ವಿಮಾನ ನಿಲ್ದಾಣದ ಸಿಬ್ಬಂದಿಗಳ ವರ್ತನೆಯಿಂದ ಪ್ರಯಾಣಿಕರ ಓಡಾಟದಲ್ಲಿ ಗಮನಾರ್ಹವಾದ ಕುಂಠಿತವಾದ ಕಾರಣದಿಂದಾಗಿ ವಿಮಾನ ನಿಲ್ದಾಣದಿಂದ ಮೂಲಕ ಕಡಿಮೆ ಸಂಖ್ಯೆಯ ವಿಮಾನಗಳು ಕಾರ್ಯನಿರ್ವಹಿಸಿದ ಪರಿಣಾಮ ಶ್ರೇಯಾಂಕವು ಕುಸಿದಿದೆ ಎಂದು ತಿಳಿದುಬಂದಿದೆ.