ಮಂಗಳೂರು: ಗಾಂಜಾ ಪ್ರಕರಣದಲ್ಲಿ ವೈದ್ಯರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ವಜಾಗೊಳಿಸಿದೆ.
ಅತ್ತಾವರ ಕೆಎಂಸಿ ಆಸ್ಪತ್ರೆ ಮೆಡಿಕಲ್ ಆಫೀಸರ್ ಡಾ.ಸಮೀರ್, ಮಣಿಪಾಲ ಕೆಎಂಸಿ ಆಸ್ಪತ್ರೆ ಮೆಡಿಕಲ್ ಸರ್ಜನ್ ಡಾ.ಮಣಿಮಾರನ್ ಅವರನ್ನು ಆಡಳಿತ ಮಂಡಳಿ ವಜಾ ಮಾಡಿ ಗುತ್ತಿಗೆ ರದ್ದುಪಡಿಸಿದೆ.
ಉಳಿದ 7 ವೈದ್ಯಕೀಯ ವಿದ್ಯಾರ್ಥಿಗಳು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ನದೀಯಾ ಸಿರಾಜ್, ಡಾ.ವರ್ಷಿಣಿ ಪ್ರತಿ, ಡಾ.ರಿಯಾ ಚಡ್ಡಾ, ಡಾ.ಇರಾ ಬಾಸಿನ, ಡಾ.ಕ್ಷಿತಿಜ್ ಗುಪ್ತಾ ಹಾಗೂ ಡಾ.ವಿ.ಎಸ್.ಹರ್ಷಕುಮಾರ್ ಅಮಾನತುಗೊಳಿಸಲಾಗಿದೆ.