Home ಕರಾವಳಿ ಮಂಗಳೂರು | ನ.8 ರಂದು ದೆಹಲಿಯಲ್ಲಿ ಪದ್ಮಶ್ರೀ ಸ್ವೀಕರಿಸಲಿರುವ ಅಕ್ಷರ ಸಂತ ಹಾಜಬ್ಬ

ಮಂಗಳೂರು | ನ.8 ರಂದು ದೆಹಲಿಯಲ್ಲಿ ಪದ್ಮಶ್ರೀ ಸ್ವೀಕರಿಸಲಿರುವ ಅಕ್ಷರ ಸಂತ ಹಾಜಬ್ಬ

ಮಂಗಳೂರು: 2020ನೇ ಸಾಲಿನ ಪದ್ಮಶ್ರೀ ಪುರಸ್ಕಾರವನ್ನು ನ.8 ರಂದು ದೆಹಲಿಯಲ್ಲಿ ಅಕ್ಷರ ಸಂತ ಹಾಜಬ್ಬರವರು ರಾಷ್ಟ್ರಪತಿ ಅವರಿಂದ ಸ್ವೀಕರಿಸಲಿದ್ದಾರೆ.

ಅವರಿಗೆ ದೆಹಲಿಗೆ ಆಗಮಿಸುವಂತೆ ಪತ್ರ ಬಂದಿದ್ದು, ನ.7 ರಂದು ತಮ್ಮ ಸಹಾಯಕನ ಜತೆ ವಿಮಾನದಲ್ಲಿ ಬೆಂಗಳೂರು ಅಥವಾ ಮುಂಬಯಿ ಮೂಲಕ ದಿಲ್ಲಿಗೆ ತೆರಳಿ, 8 ರಂದು ಅಶೋಕ ಹೋಟೆಲ್‌ ನಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಿ ದೇಶದ ಪ್ರತಿಷ್ಠಿತ ಪುರಸ್ಕಾರ ಸ್ವೀಕರಿಸಲಿದ್ದಾರೆ.

2020 ರ ಜನವರಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ಪದ್ಮಶ್ರೀ ಪುರಸ್ಕಾರ ಘೋಷಿಸಿ , ಮಾರ್ಚ್‌ ನಲ್ಲಿ ಪ್ರದಾನ ಮಾಡುವ ದಿನಾಂಕ ನಿಗದಿಪಡಿಸಲಾಗಿತ್ತು. ಕೋವಿಡ್‌ನಿಂದಾಗಿ ದೇಶದಲ್ಲಿ ಲಾಕ್‌ ಡೌನ್ ಘೋಷಿಸಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು.

Join Whatsapp
Exit mobile version