ಮಂಗಳೂರು: ಮೀನುಗಾರಿಕೆಗೆ ತೆರೆಳಿದ್ದ ಗಿಲ್ ನೆಟ್ ಬೋಟ್ ಬಿರುಗಾಳಿಗೆ ಸಿಲುಕಿ ಓರ್ವ ಮೀನುಗಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ಇಂದು ಮುಂಜಾನೆ ಪಣಂಬೂರು ಬೀಚ್ ಬಳಿ ಸಂಭವಿಸಿದೆ.
ಕಸಬಾ ಬೆಂಗರೆ ನಿವಾಸಿ ಶರೀಫ್ ನಾಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ. ಅಲ್ಲದೆ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬವರನ್ನು ಅಲ್ಲಿನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ನಾಪತ್ತೆಯಾದ ಶರೀಫ್ ಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.