Home ಟಾಪ್ ಸುದ್ದಿಗಳು ಮಂಗಳೂರು | ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರ್: ಚಾಲಕನಿಗೆ ದಂಡ

ಮಂಗಳೂರು | ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರ್: ಚಾಲಕನಿಗೆ ದಂಡ

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೆದ್ದಾರಿ ಬಿಟ್ಟು ಕಂದಕಕ್ಕೆ ನುಗ್ಗಿದ ಘಟನೆ ಗುರುಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಕಾರು ಚಾಲಕನಿಗೆ 3000 ರೂ.ಪೊಲೀಸರು ದಂಡ ವಿಧಿಸಿದ್ದಾರೆ.


ಕಾರು ಚಾಲಕ ಬಂಟ್ವಾಳ ನಿವಾಸಿ ಪಿ ಎಸ್ ಮಹಮ್ಮದ್ ಎಂದು ಗುರುತಿಸಲಾಗಿದೆ.

ಕಾರು ಉರುಳಿ ಬಿದ್ದ ದೃಶ್ಯವು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಕಾರು ಚಾಲಕ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಬಜಪೆ ಠಾಣಾ ಪೊಲೀಸರು ಕಾರು ಚಾಲಕನ ವಿರುದ್ಧ ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಪ್ರಕರಣ ದಾಖಲಿಸಿ 3000 ರೂ. ದಂಡ ವಿಧಿಸಿದ್ದಾರೆ.

Join Whatsapp
Exit mobile version