Home ಟಾಪ್ ಸುದ್ದಿಗಳು ಪೊಲೀಸರ ಮೇಲೆ ತಲವಾರು ದಾಳಿ ಪ್ರಕರಣ | ಗೋಲಿಬಾರ್ ಗೆ ಪ್ರತೀಕಾರದ ಆರೋಪ; 8 ಮಂದಿ...

ಪೊಲೀಸರ ಮೇಲೆ ತಲವಾರು ದಾಳಿ ಪ್ರಕರಣ | ಗೋಲಿಬಾರ್ ಗೆ ಪ್ರತೀಕಾರದ ಆರೋಪ; 8 ಮಂದಿ ಬಂಧನ

ಮಂಗಳೂರು : ಡಿ.16ರಂದು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ತಲವಾರು ದಾಳಿ ನಡೆಸಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. 2019ರ ಡಿ.19ರ ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂಬ ಮಾಹಿತಿ ದೊರಕಿದೆ. ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಬಂಧಿಸಲಾಗಿದೆ.

ಪತ್ರಿಕಾಗೋಷ್ಠಿಯೊಂದರಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ಗೋಲಿಬಾರ್ ನಿಂದ ವ್ಯವಸ್ಥೆ ಬಗ್ಗೆ ಅಸಮಾಧಾನವಾಗಿದ್ದ ಹಿನ್ನೆಲೆಯಲ್ಲಿ, ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಬಂಧಿತರನ್ನು ಬಂಟ್ವಾಳ ನಿವಾಸಿ ಮುಹಮ್ಮದ್ ನವಾಝ್, ಕುದ್ರೋಳಿ ನಿವಾಸಿ ಅನೀಶ್ ಅಶ್ರಫ್, ಕುದ್ರೋಳಿ ನಿವಾಸಿ ಅಬ್ದುಲ್ ಖಾದರ್ ಫಹಾದ್, ಬಜ್ಪೆ ನಿವಾಸಿ ಶೇಖ್ ಮುಹಮ್ಮದ್ ಹ್ಯಾರಿಸ್ ಯಾನೆ ಜಿಗ್ರಿ, ಕುದ್ರೋಳಿ ನಿವಾಸಿ ರಾಹಿಲ್ ಯಾನೆ ಚೋಟು ರಾಹಿಲ್, ತಣ್ಣೀರುಬಾವಿ ನಿವಾಸಿ ಮುಹಮ್ಮದ್ ಖಾಯೀಸ್ ಎಂದು ಗುರುತಿಸಲಾಗಿದೆ.

ನಗರದ ನ್ಯೂಚಿತ್ರಾ ಸರ್ಕಲ್ ಬಳಿ ಕರ್ತವ್ಯ ನಿರತರಾಗಿದ್ದ ಬಂದರು ಠಾಣಾ ಸಿಬ್ಬಂದಿ ಹೆಡ್ ಕಾನ್ಸ್ ಟೇಬಲ್ ಗಣೇಶ್ ಕಾಮತ್ ಮತ್ತು ಮಹಿಳಾ ಸಿಬ್ಬಂದಿ ಮೇಲೆ ಬೈಕ್ ನಲ್ಲಿ ಬಂದು ದಾಳಿ ನಡೆಲಾಗಿತ್ತು.

Join Whatsapp
Exit mobile version