Home ಕರಾವಳಿ ಮಂಗಳೂರು : ಬಜರಂಗದಳದಿಂದ ಮುಸ್ಲಿಮ್ ಯುವಕನ ಮೇಲೆ ಮಾರಣಾಂತಿಕ ಹಲ್ಲೆ !

ಮಂಗಳೂರು : ಬಜರಂಗದಳದಿಂದ ಮುಸ್ಲಿಮ್ ಯುವಕನ ಮೇಲೆ ಮಾರಣಾಂತಿಕ ಹಲ್ಲೆ !

ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಘಪರಿವಾರದಿಂದ ನಿರಂತರ ಪ್ರಯತ್ನ ?

ಮಂಗಳೂರು : ನಿನ್ನೆ ತಡರಾತ್ರಿ ಬಜರಂಗದಳದ ಕಾರ್ಯಕರ್ತರು ಯುವಕನೋರ್ವನ ಮೇಲೆ ವಿನಾ ಕಾರಣ ಹಲ್ಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ಮೂಡುಶೆಡ್ಡೆಯ ಪಿಲಿಕುಳ ನಿಸರ್ಗದಾಮದ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹಲ್ಲೆಗೊಳಗಾದ ಯುವಕನನ್ನು ಆಶ್ಫಾಕ್ ಎಂದು ಗುರುತಿಸಲಾಗಿದೆ.

ಹಲ್ಲೆಗೈದ ಆರೋಪಿಗಳನ್ನು ಬಜರಂಗದಳದ ವಿಜಯ್‌, ವೀರೇಶ್‌, ಮನೋಜ್‌ ಮತ್ತು ವೇಲು ಎಂದು ಗುರುತಿಸಲಾಗಿದೆ. ಯುವಕ ಮಿಥುನ್ ರೈ ಪರ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದಾನೆಂದು ಹಲವು ಬಾರಿ ಬಜರಂಗದಳದ ಕಾರ್ಯಕರ್ತರು ಆತನಿಗೆ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಆದರೆ ನಿನ್ನೆ ಮೂಡುಶೆಡ್ಡೆಯ ನಿಸರ್ಗಧಾಮದ ಬಳಿ ನಿಂತಿದ್ದ ಯುವಕನಿಗೆ ರಿಕ್ಷಾದಲ್ಲಿ ಬಂದ ಆರೋಪಿಗಳು ಏಕಾ ಏಕಿ ಹಲ್ಲೆ ನಡೆಸಿದ್ದಾರೆ.


ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು, ಪ್ರೇಮಿಗಳು, ವಿದ್ಯಾರ್ಥಿಗಳೆನ್ನದೆ ಬಂಜರಂಗದಳ ಹಾಗೂ ಸಂಘಪರಿವಾರದ ಕಾರ್ಯಕರ್ತರು ಕಂಡ ಕಂಡಲ್ಲಿ ಹಲ್ಲೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿ ಹೆಚ್ಚಳವಾಗಿದ್ದು, ಜಿಲ್ಲೆಗೆ ಬರುವ ಪ್ರವಾಸಿಗರು, ವಿದ್ಯಾರ್ಥಿಗಳು ಭಯದಿಂದ ರಸ್ತೆಯಲ್ಲಿ ನಡೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಗಲಭೆ ನಡೆಸಲು ಸಂಘಪರಿವಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಸಮಾಜ ಕಂಟಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Join Whatsapp
Exit mobile version