Home ಟಾಪ್ ಸುದ್ದಿಗಳು ಮಂಗಳೂರು | ಬಸ್ಸಿನ ಫುಟ್ ಬೋರ್ಡ್’ನಲ್ಲಿ ನಿಂತು ಪ್ರಯಾಣ: 123 ಪ್ರಕರಣಗಳು ದಾಖಲು

ಮಂಗಳೂರು | ಬಸ್ಸಿನ ಫುಟ್ ಬೋರ್ಡ್’ನಲ್ಲಿ ನಿಂತು ಪ್ರಯಾಣ: 123 ಪ್ರಕರಣಗಳು ದಾಖಲು

ಮಂಗಳೂರು: ಬಸ್ಸಿನ ಫುಟ್‌ಬೋರ್ಡ್ ಪ್ರಯಾಣಕ್ಕೆ ಸಂಬಂಧಿಸಿದಂತೆ ಗುರುವಾರ ಬಸ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, 123 ಪ್ರಕರಣಗಳನ್ನು ದಾಖಲಿಸಲಾಗಿದೆ.

ನಂತೂರು ಬಳಿ ಕಂಡಕ್ಟರ್ ಸಾವಿಗೀಡಾದ ಬಳಿಕ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಬಸ್ ಗಳಿಗೆ ಬಾಗಿಲು ಕಡ್ಡಾಯಗೊಳಿಸಿದ್ದಾರೆ. ಈ ನಡುವೆ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಫುಟ್‌ಬೋರ್ಡ್‌ನಲ್ಲಿ ನಿಂತವರ ವಿರುದ್ಧ ಕ್ರಮಕೈಗೊಂಡಿದ್ದಾರೆ. ಅಲ್ಲದೆ, ಇನ್ನು ಮುಂದಕ್ಕೆ ನಿಂತಿರುವುದು ಕಂಡುಬಂದರೆ ಬಸ್ ಮುಂದಕ್ಕೆ ಕೊಂಡೊಯ್ಯಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಬಾಗಿಲು ಹೊಂದಿರುವ ಬಸ್‌ಗಳು ಇನ್ನೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ಹಾಗೂ ಬಾಗಿಲನ್ನು ಸಂಚಾರದ ಸಮಯದಲ್ಲಿ ಮುಚ್ಚಿರಬೇಕೆಂದು ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version