Home ಟಾಪ್ ಸುದ್ದಿಗಳು ಕರ್ತವ್ಯ ಲೋಪ ಆರೋಪದಡಿ ಮಂಡ್ಯ ತಹಶೀಲ್ದಾರ್ ಅಮಾನತು: ಸಿಹಿ ಹಂಚಿ ಸಂಭ್ರಮಿಸಿದ ಗ್ರಾಮಸ್ಥರು

ಕರ್ತವ್ಯ ಲೋಪ ಆರೋಪದಡಿ ಮಂಡ್ಯ ತಹಶೀಲ್ದಾರ್ ಅಮಾನತು: ಸಿಹಿ ಹಂಚಿ ಸಂಭ್ರಮಿಸಿದ ಗ್ರಾಮಸ್ಥರು

ಮಂಡ್ಯ: ಕರ್ತವ್ಯ ಲೋಪ ಹಾಗೂ  ದುರ್ನಡತೆ ಆರೋಪದಡಿ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ ಶಂಗಾಳಿ ಅಮಾನತುಗೊಂಡ ಹಿನ್ನೆಲೆ  ಬೂದನೂರು ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ತಹಶೀಲ್ದಾರ್ ಅಮಾನತು ಆಗಿದ್ದಕ್ಕೆ ಮಂಡ್ಯ ಡಿಸಿ ಅಶ್ವಥಿಗೆ ಗ್ರಾಮಸ್ಥರು ಜೈಕಾರ ಕೂಗಿದ್ದಾರೆ. ಗ್ರಾಮಸ್ಥರು ಸ್ವಂತ ಮನೆಗಾಗಿ ಹಲವು ಭಾರಿ ಹೋರಾಟ ನಡೆಸಿದ್ದರು. ಈ ವೇಳೆ ನಿವೇಶನ ಹಂಚಿಕೆ ವಿಚಾರದಲ್ಲಿ ತಹಶೀಲ್ದಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಗ್ರಾಮಸ್ಥರಿಗೆ ನ್ಯಾಯ ಕೊಡಿಸುವಲ್ಲಿ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ವಿಫಲರಾಗಿದ್ದರು. ಗ್ರಾಮಸ್ಥರು ಹಲವು ಬಾರಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಈ ಸಂಬಂಧ ಗ್ರಾಮಸ್ಥರು ತಹಶೀಲ್ದಾರ್ ವಿರುದ್ಧ ಮಂಡ್ಯ ಡಿಸಿಗೆ ದೂರು ನೀಡಿದ್ದರು. ಸದ್ಯ 13 ಕಾರಣ ನೀಡಿ ತಹಶೀಲ್ದಾರ್ ನನ್ನು ಅಮಾನತುಗೊಳಿಸಲಾಗಿದೆ.

Join Whatsapp
Exit mobile version