Home ಕ್ರೀಡೆ IPL-2022: ಲಲಿತ್-ಅಕ್ಷರ್ ಬ್ಯಾಟಿಂಗ್ ಮೋಡಿ, ರೋಚಕ‌ ಪಂದ್ಯದಲ್ಲಿ ಗೆದ್ಡ ಡೆಲ್ಲಿ ಕ್ಯಾಪಿಟಲ್ಸ್

IPL-2022: ಲಲಿತ್-ಅಕ್ಷರ್ ಬ್ಯಾಟಿಂಗ್ ಮೋಡಿ, ರೋಚಕ‌ ಪಂದ್ಯದಲ್ಲಿ ಗೆದ್ಡ ಡೆಲ್ಲಿ ಕ್ಯಾಪಿಟಲ್ಸ್

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಭಾನುವಾರದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ4 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿದೆ.
ಬ್ರಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 178 ರನ್ ಚೇಸಿಂಗ್ ವೇಳೆ ಡೆಲ್ಲಿ 13 ಓವರ್ ಕಳೆಯುವಷ್ಟರಲ್ಲಿ 104 ರನ್’ಗಳಿಗೆ 6 ಪ್ರಮುಖ ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಈ ವೇಳೆ
ಲಲಿತ್ ಯಾದವ್ ಜೊತೆಗೂಡಿದ ಅನುಭವಿ ಅಕ್ಷರ್ ಪಟೇಲ್, ಇನ್ನೂ ಹತ್ತು ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು
ಗೆಲುವಿನ ಗುರಿ ತಲುಪಿಸಿದರು.
ಲಲಿತ್ 48 ಹಾಗೂ ಅಕ್ಷರ್ ಪಟೇಲ್ 38 ರನ್’ಗಳಿಸಿ ಅಜೇಯರಾಗುಳಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್, ಆರಂಭಿಕ ಇಶಾನ್ ಕಿಶನ್ 81 ಹಾಗೂ ರೋಹಿತ್ ಶರ್ಮಾ 41ರನ್’ಗಳ ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 177 ರನ್ ಕಲೆಹಾಕಿತ್ತು.

Join Whatsapp
Exit mobile version