Home ಟಾಪ್ ಸುದ್ದಿಗಳು ಮೂವರು ಯುವಕರ ಮೇಲೆ ಕಾರು ಹರಿಸಿದಾತ ಪೊಲೀಸ್ ವಶಕ್ಕೆ

ಮೂವರು ಯುವಕರ ಮೇಲೆ ಕಾರು ಹರಿಸಿದಾತ ಪೊಲೀಸ್ ವಶಕ್ಕೆ

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಮೂವರು ಯುವಕರ ಮೇಲೆ ಕಾರು ಹರಿಸಿದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ನಗರದ ಟಿ.ಕೆ. ಬಡಾವಣೆಯಲ್ಲಿ ಡಿ. 4ರ ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ರಾಹುಲ್, ಪ್ರಜ್ವಲ್ ಮತ್ತು ಆನಂದ್ ಎಂಬವರಿಗೆ ಗಂಭೀರ ಗಾಯವಾಗಿತ್ತು.
ರಾತ್ರಿ ಪ್ರಜ್ವಲ್ ಮತ್ತು ರಾಹುಲ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ದರ್ಶನ್ ಮತ್ತು ಆತನ ತಂದೆ ಇಂಡಿಕೇಟರ್ ಹಾಕದೆ ಕಾರನ್ನು ಏಕಾಏಕಿ ತಿರುಗಿಸಿದ್ದಾನೆ. ಇದಕ್ಕೆ ಪ್ರಜ್ವಲ್ ಮತ್ತು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕೋಪಗೊಂಡ ದರ್ಶನ್ ತಂದೆ, ಪ್ರಜ್ವಲ್ ಮತ್ತು ರಾಹುಲ್ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.


ಇವರ ನಡುವಿನ ಜಗಳ ನೋಡಿ ಅದೇ ದಾರಿಯಲ್ಲಿ ಹೋಗುತ್ತಿದ್ದ ಆನಂದ್ ಎಂಬಾತ ಜಗಳ ಬಿಡಿಸಲು ಬಂದಿದ್ದಾನೆ. ಆದರೆ ಮಾತಿನ ಚಕಮಕಿ ತೀವ್ರವಾಗಿ ಆಕ್ರೋಶಗೊಂಡಿದ್ದ ದರ್ಶನ್, ಪ್ರಜ್ವಲ್, ರಾಹುಲ್ ಮತ್ತು ಜಗಳ ಬಿಡಿಸಲು ಬಂದ ಆನಂದ್ ಮೇಲೆ ಕಾರು ಹರಿಸಿ ಪರಾರಿಯಾಗಿದ್ದಾನೆ.


ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ಪೋಷಕರು ಕೃತ್ಯದ ಬಗ್ಗೆ ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ತಂದೆ ತಾಯಿಯ ಕುಮ್ಮಕ್ಕಿನಿಂದ ದರ್ಶನ್ ಈ ಕೃತ್ಯ ಎಸಗಿದ್ದಾನೆ. ಅವರನ್ನು ಬಂಧಿಸಿ ಪ್ರಕರಣ ದಾಖಲಿಸುವಂತೆ ಯುವಕರ ಪೋಷಕರು ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ದರ್ಶನ್’ನನ್ನು ವಶಕ್ಕೆ ಪಡೆದಿದ್ದಾರೆ.

Join Whatsapp
Exit mobile version