Home ಟಾಪ್ ಸುದ್ದಿಗಳು ‘CFI ಸೇರಿರಿ’ ಗೋಡೆಬರಹ ಹಳೆಯದು: ಶಿವಮೊಗ್ಗ ಪೊಲೀಸರ ಸ್ಪಷ್ಟನೆ

‘CFI ಸೇರಿರಿ’ ಗೋಡೆಬರಹ ಹಳೆಯದು: ಶಿವಮೊಗ್ಗ ಪೊಲೀಸರ ಸ್ಪಷ್ಟನೆ

ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ಪತ್ತೆಯಾದ ‘ಸಿಎಫ್’ಐ ಸೇರಿರಿ’ ಗೋಡೆಬರಹ ಒಂದೆರಡು ತಿಂಗಳ ಹಳೆಯದು ಎಂದು ಶಿವಮೊಗ್ಗ ಪೊಲೀಸರು ಮಾಹಿತಿ ನೀಡಿದ್ದಾರೆ.


ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಸೆಪ್ಟೆಂಬರ್ 4 ರಂದೇ ಈ ಗೋಡೆಬರಹಗಳ ಬರೆಯಲಾಗಿದೆ ಎಂದು ಹೇಳಿದ್ದಾರೆ.


ಪ್ರಕರಣದ ತನಿಖೆ ವೇಳೆ ಗಣೇಶ ಮೂರ್ತಿ ಮೆರವಣಿಗೆಯ ಹಳೆಯ ವೀಡಿಯೋಗಳನ್ನು ಪರಿಶೀಲಿಸಿದಾಗ ಸೆಪ್ಟೆಂಬರ್’ಗೂ ಮುನ್ನವೇ ಈ ಗೋಡೆಬರಹಗಳು ಬರೆದಿರುವುದು ಕಂಡು ಬಂದಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮಾಹಿತಿ ನೀಡಿದ್ದಾರೆ.


ನ.28ರಂದು ಶಿರಾಳಕೊಪ್ಪದಲ್ಲಿ ಹಲವೆಡೆ ಗೋಡೆಗಳ ಮೇಲೆ ಸಿಎಫ್’ಐ ಸೇರಿ ಎಂಬ ಬರಹಗಳು ಪತ್ತೆಯಾಗಿದ್ದವು. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version