ಬಕೆಟ್ ಗೆ ತಲೆ ಮುಳುಗಿಸಿ ಪತ್ನಿಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ

Prasthutha|

ಹೈದರಾಬಾದ್: ನೀರು ತುಂಬಿದ ಬಕೆಟ್ ಗೆ ತಲೆ ಮುಳುಗಿಸಿ ಪತ್ನಿಯನ್ನು ಹತ್ಯೆ ಮಾಡಿ ಬಳಿಕ ತಾನೂ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

- Advertisement -


ಮಹಾನಂದ ಬಿಸ್ವಾಸ್ (24), ಪಂಪಾ ಸರ್ಕಾ (22) ಮೃತರು ಎಂದು ಗುರುತಿಸಲಾಗಿದೆ.


ಇವರಿಬ್ಬರು ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿರುವ ಶಾಪಿಂಗ್ ಮಾಲ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಮದುವೆಯಾಗಿ ಪ್ರೇಮ್ ನಗರದಲ್ಲಿ ವಾಸವಿದ್ದರು. ಪತ್ನಿಯ ಶೀಲ ಶಂಕಿಸಿ, ಕೆಲವು ದಿನಗಳ ಹಿಂದೆ ಬಿಸ್ವಾಸ್ ಆಕೆಯನ್ನು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ತಾರಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.

Join Whatsapp
Exit mobile version