Home ಕರಾವಳಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತ: ವ್ಯಕ್ತಿ ಮೃತ್ಯು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತ: ವ್ಯಕ್ತಿ ಮೃತ್ಯು

ಮಂಗಳೂರು: ವ್ಯಕ್ತಿಯೋರ್ವರು ದುಬೈಯಿಂದ ಹಿಂದಿರುಗಿದ ವೇಳೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮುಕ್ಕ ನಿವಾಸಿ ಮುಹಮ್ಮದ್ (65) ಮೃತರು ಎಂದು ಗುರುತಿಸಲಾಗಿದೆ.

ಮುಹಮ್ಮದ್ ತನ್ನ ಪತ್ನಿಯನ್ನು ಭೇಟಿಯಾಗಲು ದುಬೈಗೆ ಹೋಗಿದ್ದರು. ಕೆಲ ದಿನಗಳ ಬಳಿಕ ದುಬೈನಿಂದ ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಆಗಮಿಸಿದ್ದ ಮುಹಮ್ಮದ್ ಅವರು ಎಮಿಗ್ರೇಶನ್ ಗೆ ಪಾಸ್ ಪೋರ್ಟ್ ನೀಡಿ ನಿಂತಿದ್ದ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version