Home ಟಾಪ್ ಸುದ್ದಿಗಳು ದಾಂಡಿಯಾ ನೃತ್ಯ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಮೃತ್ಯು !

ದಾಂಡಿಯಾ ನೃತ್ಯ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಮೃತ್ಯು !

ಗುಜರಾತ್: ಕಾರ್ಯಕ್ರಮಯೊಂದರಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಾಹೋದ್ ಜಿಲ್ಲೆಯ ದೇವಗಢ್ ಬರಿಯಾದಲ್ಲಿ ಭಾನುವಾರ ನಡೆದಿದೆ.

ಈ ಘಟನೆಯ ಸಂಪೂರ್ಣ ದೃಶ್ಯವನ್ನು ಸಮಾರಂಭದಲ್ಲಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೃತ ವ್ಯಕ್ತಿಯನ್ನು ದೇವಗಡ ಬರಿಯಾ ನಿವಾಸಿ ರಮೇಶ್ ವಂಝಾರ (51) ಎಂದು ಗುರುತಿಸಲಾಗಿದೆ.

ವೀಡಿಯೋದಲ್ಲಿ ರಮೇಶ್ ವಂಝಾರ ಅವರು ಕೈಯಲ್ಲಿ ಕೋಲು ಹಿಡಿದುಕೊಂಡು ಮತ್ತೋರ್ವ ವ್ಯಕ್ತಿಯ ಜೊತೆಗೆ ದಾಂಡಿಯಾ ನೃತ್ಯ ಮಾಡುತ್ತಿರುತ್ತಾರೆ. ಈ ವೇಳೆ ವಂಝಾರ ದಣಿದಿರಬಹುದು ಅಂದುಕೊಂಡು ಅವರ ಬಳಿ ಇದ್ದ ಕೋಲನ್ನು ಮತ್ತೊಬ್ಬರು ತೆಗೆದುಕೊಂಡು ಹೋಗುತ್ತಾರೆ. ಆಗ ಇದ್ದಕ್ಕಿದ್ದಂತೆ ರಮೇಶ್ ವಂಝಾರ ನೆಲದ ಮೇಲೆ ಕುಸಿದು ಬೀಳುತ್ತಾರೆ. ಹೃದಯ ಸ್ತಂಭನದಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version