ಬೆಂಗಳೂರು: ಪ್ರತಿ ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಲು ಮಳೆ ಮತ್ತು ಒರಟು ಹವಾಮಾನವನ್ನು ಬಿಬಿಎಂಪಿ ದೂಷಿಸುವುದರ ಬದಲು ಕಳಪೆ ಕಾರ್ಯನಿರ್ವಹಣೆ ಮತ್ತು ಮೇಲ್ವಿಚಾರಣೆಯ ಕೊರತೆ ಸಮಸ್ಯೆಯನ್ನು ನಿವಾರಿಸಿ ಎಂದು ಸಂಚಾರ ತಜ್ಞ ಪ್ರೊ.ಎಂ.ಎನ್.ಶ್ರೀಹರಿ ಸಲಹೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯು ಕೆಲಸದ ಗುಣಮಟ್ಟವನ್ನು ಕಾಯ್ದುಕೊಳ್ಳುವತ್ತ ಗಮನ ಹರಿಸಿದರೆ, ಪ್ರತಿ ವರ್ಷ ಅಂತಹ ಸಮಸ್ಯೆಗಳು ಸಂಭವಿಸುವುದಿಲ್ಲ, ಆದರೆ ಕೆಲಸವು ಕಳಪೆಯಾಗಿದೆ ಎಂದರು.
ಅಲ್ಲದೆ ತಜ್ಞರ ಮಾತಿಗೆ ಸಹಮತಿ ಸೂಚಿಸಿರುವ ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಗುತ್ತಿಗೆದಾರರೊಬ್ಬರು, ಕಳಪೆ ಗುಣಮಟ್ಟದ ಕೆಲಸಗಳಿಗೆ ಭ್ರಷ್ಟಾಚಾರ ಕಾರಣ ಎಂದು ಒಪ್ಪಿಕೊಂಡಿದ್ದಾರೆ.
ಕಾಮಗಾರಿಗಳಲ್ಲಿ ನಿಗದಿತ ಮಾನದಂಡಗಳನ್ನು ಅಳವಡಿಸಲಾಗಿದೆಯೇ ಎಂದು ಪರಿಶೀಲಿಸುವ ವಿಷಯದಲ್ಲಿ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ವ್ಯಾಪಕ ಭ್ರಷ್ಟಾಚಾರ ಮತ್ತು ಕಮಿಷನ್ ಗಳೊಂದಿಗೆ, ನಾವು ಬದುಕುಳಿಯಬೇಕಾದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ ಎಂದು ಗುತ್ತಿಗೆದಾರ ಹೇಳಿದರು.