Home ಟಾಪ್ ಸುದ್ದಿಗಳು ʻಕರಿಮಣಿ ಮಾಲೀಕ ನೀನಲ್ಲʼ ಎಂದಿದಕ್ಕೆ ಪತಿ ಆತ್ಮಹತ್ಯೆ: ಸ್ಪಷ್ಟನೆ ನೀಡಿದ ಪತ್ನಿ

ʻಕರಿಮಣಿ ಮಾಲೀಕ ನೀನಲ್ಲʼ ಎಂದಿದಕ್ಕೆ ಪತಿ ಆತ್ಮಹತ್ಯೆ: ಸ್ಪಷ್ಟನೆ ನೀಡಿದ ಪತ್ನಿ

ಚಾಮರಾಜನಗರ: ಪತ್ನಿ ಮಾಡಿದ ʼಕರಿಮಣಿ ಮಾಲಿಕ ನೀನಲ್ಲʼ ರೀಲ್ಸ್ ಗೆ ನೊಂದ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

‘ನಾನು ರೀಲ್ಸ್ ಮಾಡಿದಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಹಿಂದಿನಿಂದಲು ನಾನು ರೀಲ್ಸ್ ಮಾಡಿದ್ದೇನೆ, ಅದು ನನ್ನ ಪತಿ ಕುಮಾರ್ ಗೂ ತಿಳಿದಿದೆ. ನನ್ನ ಮೇಲೆ ಅವರ ಕುಟುಂಬಸ್ಥರು ಸುಕಾ ಸುಮ್ಮನೆ ಆರೋಪಿಸುತ್ತಿದ್ದಾರೆ. ನಿಜವಾಗಿಯೂ ನನ್ನ ಪತಿ ಸಾವಿಗೆ ಮಾಡಿಕೊಂಡಿದ್ದ ಸಾಲವೇ ಕಾರಣ ಎಂದಿದ್ದಾರೆ.


ಇನ್ನು ಆತ್ಮಹತ್ಯೆ ಮಾಡಿಕೊಂಡ ಕುಮಾರ್ ‘ಪ್ರತಿನಿತ್ಯ ಕುಡಿಯುತ್ತಿದ್ದ, ಜೊತೆಗೆ ಇಸ್ಪಿಟ್ ಆಡುವ ಚಟ ಕೂಡ ಇತ್ತು. ಈ ಹಿನ್ನಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣವಲ್ಲ ಎಂದಿದ್ದಾರೆ.

Join Whatsapp
Exit mobile version