ಕಟ್ಟಡದ ಟೆರೇಸ್‌ನಿಂದ ಎಸೆದು ವ್ಯಕ್ತಿಯ ಮೇಲೆ ಹಲ್ಲೆ: ವೀಡಿಯೊ ವೈರಲ್

Prasthutha|

ಲಕ್ನೋ: ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯೊಬ್ಬನನ್ನು ಕಟ್ಟಡದ ಟೆರೇಸ್ ನಿಂದ ಎಸೆದು ಹಲ್ಲೆ ನಡೆಸಿದ ಘಟನೆ ನಗರದ ಮಡೆಗಂಜ್ ಪ್ರದೇಶದಲ್ಲಿ ನಡೆದಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

- Advertisement -

ವ್ಯಕ್ತಿ ಕೆಳಗೆ ಬಿದ್ದ ನಂತರವೂ ದುಷ್ಕರ್ಮಿಗಳು ವ್ಯಕ್ತಿಯನ್ನು ಹೊಡೆಯಲು ಮತ್ತು ಒದೆಯಲು ಮುಂದಾಗಿದ್ದು ಕೂಡ ವೀಡಿಯೊದಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳನ್ನು ಅಮಿತ್, ಗೌತಮ್ ಮತ್ತು ಅಂಕುರ್ ಎಂದು ಗುರುತಿಸಲಾಗಿದೆ.

ಘಟನೆಯ ತುಣುಕನ್ನು ನೆರೆಹೊರೆಯವರು ಸೆರೆಹಿಡಿದಿದ್ದಾರೆ. ವೀಡಿಯೊದಲ್ಲಿ ಮೂವರು ವ್ಯಕ್ತಿಯನ್ನು ಎತ್ತಿಕೊಂಡು ಕಟ್ಟಡದ ಮೊದಲ ಮಹಡಿಯ ಟೆರೇಸ್‌ನಿಂದ ಎಸೆಯುವುದನ್ನು ಕಾಣಬಹುದು.

- Advertisement -

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಎರಡು ಪೋಸ್ಟ್‌ನಲ್ಲಿ ಎರಡು ಪಡೆಗಳನ್ನು ಟ್ಯಾಗ್ ಮಾಡಿದ ನಾಗರಿಕರಿಗೆ ಉತ್ತರ ಪ್ರದೇಶ ಪೊಲೀಸರು ಮತ್ತು ಲಕ್ನೋ ಪೊಲೀಸರು ಉತ್ತರಿಸಿದ್ದಾರೆ. ತನಿಖೆ ಆರಂಭಿಸಿದ್ದೇವೆಂದು ಹೇಳಿದ್ದಾರೆ.

Join Whatsapp
Exit mobile version