ಗುಜರಾತ್ ಗೇಮ್ ಝೋನ್ ಬೆಂಕಿ ದುರಂತದಲ್ಲಿ ಸಾವಿನ‌ ಸಂಖ್ಯೆ 35ಕ್ಕೆ ಏರಿಕೆ: ಆಘಾತ ವ್ತಕ್ತಪಡಿಸಿದ ಹೈಕೋರ್ಟ್

Prasthutha|

ಗುಜರಾತ್: ರಾಜ್‌ಕೋಟ್‌ ಮನರಂಜನಾ ಕೇಂದ್ರ ‘ಟಿಆರ್‌ಪಿ ಗೇಮ್‌ ಝೋನ್‌’ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭಾರಿ ಅಗ್ನಿ ದುರಂತ ಇಡೀ ದೇಶವನ್ನೇ ಮನಕಲುಕಿದೆ. ಭೀಕರ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಗೇಮಿಂಗ್ ಝೋನ್‌ನಲ್ಲಿ ವೆಲ್ಡಿಂಗ್ ವೇಳೆ ಹೊತ್ತಿಕೊಂಡ ಕಿಡಿಯಿಂದಾಗಿ ಬೆಂಕಿ ವ್ಯಾಪಕವಾಗಿ ಹರಡಿದ್ದು, ಮಕ್ಕಳು ಸೇರಿದಂತೆ 28 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

- Advertisement -

ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಗುಜರಾತ್‌ ಹೈಕೋರ್ಟ್‌ನ ವಿಶೇಷ ಪೀಠ, ಇದು ಮಾನವನಿಂದಾದ ದುರಂತ ಎಂದು ಹೇಳಿದೆ. ಅಲ್ಲದೆ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಯಾವ ನಿಬಂಧನೆ ಮೇಲೆ ಈ ಗೇಮ್ ಝೋನ್‌ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದರ ಬಗ್ಗೆ ಮಾಹಿತಿ ಕೊಡಿ ಎಂದು ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.

ಮಾನವನಿಂದಾಗಿ ನಡೆದ ಈ ದುರಂತದಲ್ಲಿ ಮುಗ್ಧ ಮಕ್ಕಳು ಮೃತಪಟ್ಟಿದ್ದಾರೆ. ತಮ್ಮವರನ್ನು ಕಳೆದುಕೊಂಡು ಕುಟುಂಬಗಳು ದುಃಖದಲ್ಲಿವೆ’ ಎಂದು ವಿಶೇಷ ಪೀಠದ ನ್ಯಾಯಾಧೀಶರಾದ ಬೈರೆನ್ ವೈಷ್ಣವ್ ಹೇಳಿದರು.

- Advertisement -

‘ಗುಜರಾತ್ ಸಮಗ್ರ ಸಾಮಾನ್ಯ ಅಭಿವೃದ್ಧಿ ನಿಯಂತ್ರಣ ನಿಯಮಗಳಲ್ಲಿನ ನ್ಯೂನತೆಗಳನ್ನು ಲಾಭ ಪಡೆದು ಗೇಮಿಂಗ್ ಝೋನ್ ಕಾರ್ಯನಿರ್ವಹಿಸುತ್ತಿತ್ತು ಎಂದು ದಿನಪತ್ರಿಕೆಗಳ ವರದಿಯಿಂದ ತಿಳಿದುಬರುತ್ತದೆ. ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅಗತ್ಯ ಅನುಮತಿಯೂ ಪಡೆದಿರಲಿಲ್ಲ’ ಎಂದು ಪೀಠ ಹೇಳಿದೆ.

ಅಗ್ನಿ ಸುರಕ್ಷತೆ, ನಿರ್ಮಾಣಕ್ಕೆ ಯಾವುದೇ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವಲ್ಲಿನ ಅಡಚಣೆಗಳನ್ನು ನಿವಾರಿಸುವ ಸಲುವಾಗಿ, ಇಂತಹ ಮನರಂಜನಾ ಚಟುವಟಿಕೆಗಳನ್ನು ನಡೆಸಲು ಮಾಲೀಕರು ತಾತ್ಕಾಲಿಕ ಕಟ್ಟಡವನ್ನು ಬಳಸುತ್ತಾರೆ ಎಂದು ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಕೋರ್ಟ್ ಹೇಳಿದೆ.

ಗುಜರಾತ್‌ನ ರಾಜ್ ಕೋಟ್ ಬಳಿಯ ಗೇಮಿಂಗ್ ಝೋನ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

Join Whatsapp
Exit mobile version