Home ಟಾಪ್ ಸುದ್ದಿಗಳು ಸ್ಕೂಟರ್ ಸ್ವಚ್ಛಗೊಳಿಸಲು ತ್ರಿವರ್ಣ ಧ್ವಜ ಬಳಕೆ: ವ್ಯಕ್ತಿಯ ಬಂಧನ

ಸ್ಕೂಟರ್ ಸ್ವಚ್ಛಗೊಳಿಸಲು ತ್ರಿವರ್ಣ ಧ್ವಜ ಬಳಕೆ: ವ್ಯಕ್ತಿಯ ಬಂಧನ

ನವದೆಹಲಿ: 52 ವರ್ಷದ ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಸ್ವಚ್ಛಗೊಳಿಸಲು ರಾಷ್ಟ್ರಧ್ವಜವನ್ನು ಬಳಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀಡಿಯೊದಲ್ಲಿ ಆತ ತನ್ನ ಬಿಳಿ ಸ್ಕೂಟರ್ ಅನ್ನು ಮಡಚಿದ ಧ್ವಜದಿಂದ ಸ್ವಚ್ಛಗೊಳಿಸುವುದನ್ನು ಕಾಣಬಹುದು.

“ನಾವು ವೀಡಿಯೊವನ್ನು ನೋಡಿದ್ದೇವೆ. ಆತನ ಮನೆಯನ್ನು ಗುರುತಿಸಿದ್ದೇವೆ ಮತ್ತು  ಬಂಧಿಸಿದ್ದೇವೆ” ಎಂದು ಈಶಾನ್ಯ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ಧ್ವಜ ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದು, ಆ ವ್ಯಕ್ತಿಯ ವಿರುದ್ಧ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971 ರ ಸೆಕ್ಷನ್ 2 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version