Home ಟಾಪ್ ಸುದ್ದಿಗಳು ಬಸ್ ಗೆ ಬೈಕ್ ಡಿಕ್ಕಿ; ಇಬ್ಬರು ಗಂಭೀರ

ಬಸ್ ಗೆ ಬೈಕ್ ಡಿಕ್ಕಿ; ಇಬ್ಬರು ಗಂಭೀರ

ಶಿವಮೊಗ್ಗ: ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹೊಳೆಬಸ್ಸ್ಟಾಪ್ ಬಳಿ ಇರುವ ತುಂಗಾನದಿಯ ಹೊಸ ಸೇತುವೆ ಮೇಲೆ ನಡೆದಿದೆ.

ತುಂಗಾ ನದಿಯ ಹೊಳೆ ಬಸ್ ಸ್ಟಾಪ್ ಕಡೆಯಿಂದ ಬರುತ್ತಿದ್ದ ಪಲ್ಸರ್ ಬೈಕ್ ಮತ್ತು ವಿದ್ಯಾನಗರ ಕಡೆಯಿಂದ ಬರುತ್ತಿದ್ದ ಸಿಟಿ ಬಸ್ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ.


ಗಾಯಾಳುಗಳನ್ನು ಚಿಕ್ಕಲ್ ನ ನಿವಾಸಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬೈಕ್ ನುಜ್ಜುಗುಜ್ಜಾಗಿದೆ. ಘಟನೆ ನಡೆದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳೀಯ ಪೊಲೀಸರು ಧಾವಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Join Whatsapp
Exit mobile version