Home ಟಾಪ್ ಸುದ್ದಿಗಳು ದಸರಾದ ಚಿನ್ನದ ಅಂಬಾರಿ ಹೊತ್ತ ಆನೆಗೆ ಗುಂಡು ಹೊಡೆದಿದ್ದ ವ್ಯಕ್ತಿಯ ಬಂಧನ

ದಸರಾದ ಚಿನ್ನದ ಅಂಬಾರಿ ಹೊತ್ತ ಆನೆಗೆ ಗುಂಡು ಹೊಡೆದಿದ್ದ ವ್ಯಕ್ತಿಯ ಬಂಧನ

ಮೈಸೂರು: ನಾಡ ಹಬ್ಬ ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಖ್ಯಾತಿ ಪಡೆದಿರುವ ಬಲರಾಮ ಎಂಬ  ಆನೆಗೆ  ಗುಂಡು ಹೊಡೆದಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು  ಬಂಧಿಸಿದ್ದಾರೆ.

ಸುರೇಶ್ ಬಂಧಿತ ಆರೋಪಿ.  ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಸರ್ವೆ ನಂ. 27ರ ಜಮೀನಿಗೆ ಗುರುವಾರ ರಾತ್ರಿ ‘ಬಲರಾಮ’ ಬಂದಿದ್ದು, ಸಿಟ್ಟಿಗೆದ್ದ ಜಮೀನಿನ ಮಾಲೀಕ ಸುರೇಶ್‌ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಗುಂಡು ಹಾರಿಸಿದ್ದ. ಗುಂಡೇಟಿನಿಂದ ಬಲರಾಮನ ತೊಡೆ ಭಾಗಕ್ಕೆ ಗಾಯವಾಗಿದೆ.

ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ  ಬಂದೂಕು, ಕಾರ್ಟ್ರಿಜನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಬಲರಾಮನ ತೊಡೆ ಬಳಿ ಗುಂಡು ಹೊಕ್ಕಿದ್ದು, ಆನೆಗೆ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಆರ್‌ ಎಫ್‌ ಒ ರತನ್‌ಕುಮಾರ್‌ ತಿಳಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಸದ್ಯ ಆನೆಗೆ ಚಿಕಿತ್ಸೆ ನೀಡುತ್ತಿದ್ದು, ಬಲರಾಮ ಆನೆ ಚೇತರಿಸಿಕೊಂಡಿದೆ.

ಮೈಸೂರು ದಸರಾ ಮಹೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ  ಬಲರಾಮ ಆನೆ ದಸರಾ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದೆ.

Join Whatsapp
Exit mobile version