Home ಟಾಪ್ ಸುದ್ದಿಗಳು ಸಾವರ್ಕರ್ ಬುಲ್ ಬುಲ್ ಪಕ್ಷಿಯ ಮೇಲೆ ಕುಳಿತ ಎಡಿಟೆಡ್ ಚಿತ್ರ ವಾಟ್ಸಪ್ ಸ್ಟೇಟಸ್ ಹಾಕಿದ ವ್ಯಕ್ತಿಯ...

ಸಾವರ್ಕರ್ ಬುಲ್ ಬುಲ್ ಪಕ್ಷಿಯ ಮೇಲೆ ಕುಳಿತ ಎಡಿಟೆಡ್ ಚಿತ್ರ ವಾಟ್ಸಪ್ ಸ್ಟೇಟಸ್ ಹಾಕಿದ ವ್ಯಕ್ತಿಯ ಬಂಧನ

ಶಿವಮೊಗ್ಗ: ಬ್ರಿಟಿಷರೊಂದಿಗೆ ಕ್ಷಮೆ ಕೇಳಿ ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿದ ವಿ.ಡಿ.ಸಾವರ್ಕರ್ ಬುಲ್ ಬುಲ್ ಪಕ್ಷಿಯ ಮೇಲೆ ಕುಳಿತ ಎಡಿಟೆಡ್ ಚಿತ್ರವನ್ನು ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿದ್ದನ್ನು ವಿರೋಧಿಸಿ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಪೊಲೀಸರು ಸ್ಟೇಟಸ್ ಹಾಕಿದ ಯುವಕನ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

“ಅಂಡಮಾನ್ ಜೈಲಿನಿಂದ ಬುಲ್ ಬುಲ್ ಪಕ್ಷಿಯ ಮೇಲೆ ಬಂದು ಭಾರತವನ್ನು ವೀಕ್ಷಿಸುತ್ತಿದ್ದ ವೀರ ಸಾವರ್ಕರ್ ಅವರ ಅಪರೂಪದ ಚಿತ್ರ” ಎಂದು ರಾಗಿಗುಡ್ಡದ ನಿವಾಸಿ ಮನ್ಸೂರ್ ಎಂಬವರು ಬುಲ್ ಬುಲ್ ಚಿತ್ರವನ್ನು ಸ್ಟೇಟಸ್ ನಲ್ಲಿ ಹಾಕಿದ್ದರು. 

ನಗರದ ಹೊರವಲಯದ ರಾಗಿ ಗುಡ್ಡ ದಲ್ಲಿ ಸಾರ್ವರ್ಕರ್ ರಿಗೆ ಅವಮಾನಿಸಲಾಗಿದೆ ಎಂದು ಬಜರಂಗದಳದ ಕಾರ್ಯಕರ್ತರು ರಾಗಿಗುಡ್ಡದಲ್ಲಿ ಇಂದು ಧರಣಿ ನಡೆಸಿದರು. ಬಳಿಕ ಮನ್ಸೂರ್ ವಿರುದ್ಧ ದೂರು ದಾಖಲಿಸಿದ್ದಾರೆ.

ತಕ್ಷಣ ಪೊಲೀಸರು ಕಲಂ 153ರ ಆಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 

ಇತ್ತೀಚೆಗೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ 8ನೇ ತರಗತಿಯಲ್ಲಿ ಸಾವರ್ಕರ್ ಕುರಿತು ಪಠ್ಯವನ್ನು ಸೇರಿಸಿದ್ದು, ಅದರಲ್ಲಿ ವಿ.ಡಿ.ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದಾಗ ಬುಲ್ ಬುಲ್ ಪಕ್ಷಿಯ ಮೇಲೆ ಕುಳಿತು ಭಾರತದ ದರ್ಶನ ಮಾಡುತ್ತಿದ್ದರು ಎಂದು ಬರೆದಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ವ್ಯಂಗ್ಯವಾಡಿದ್ದಾರೆ. 

ಮನ್ಸೂರ್ ಅವರನ್ನು ಬಳಿಕ ಪೊಲೀಸರು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Join Whatsapp
Exit mobile version