ಮುಂಬೈ: ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಮುಂಬೈ ನಿವಾಸಕ್ಕೆ ಪದೇ ಪದೇ ಬೆದರಿಕೆ ಕರೆ ಮಾಡುತ್ತಿದ್ದ ವ್ಯಕ್ತಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಎನ್ ಸೋನಿ(45) ಎಂದು ಗುರುತಿಸಲಾಗಿದೆ. ಪಾಟ್ನಾದಲ್ಲಿ ಆರೋಪಿಯನ್ನು ಬಂಧಿಸಿದ್ದು, ಮುಂಬೈಗೆ ಕರೆತರಲಾಗುತ್ತಿದೆ ಎಂದು ಗಾಮ್ ದೇವಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ದಿನಗಳಿಂದ ಸೋನಿ, ಪವಾರ್ ಅವರ ಬಂಗಲೆ ಸಿಲ್ವರ್ ಓಕ್ ಗೆ ಪದೇ ಪದೇ ಕರೆ ಮಾಡಿ ಅಶ್ಲೀಲ ಪದಗಳನ್ನು ಬಳಸಿದ್ದಲ್ಲದೆ, ಪವಾರ್ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ಗೆ ನಾನು ಮುಂಬೈಗೆ ಬಂದು ನಿಮ್ಮನ್ನು ದೇಶ ನಿರ್ಮಿತ ಗನ್‌ನಿಂದ ಶೂಟ್ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದನು.
ಈ ಸಂಬಂಧ ಸೋನಿ ವಿರುದ್ಧ 294(ಅಶ್ಲೀಲ ಕಾಯ್ದೆ) ಮತ್ತು 506-II (ಅಪರಾಧ ಬೆದರಿಕೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.