Home Uncategorized ಪ್ರಧಾನಿ ಮೋದಿ ದೇಶದ ಅತಿದೊಡ್ಡ ಗಲಭೆಕೋರ : ಮಮತಾ ಬ್ಯಾನರ್ಜಿ

ಪ್ರಧಾನಿ ಮೋದಿ ದೇಶದ ಅತಿದೊಡ್ಡ ಗಲಭೆಕೋರ : ಮಮತಾ ಬ್ಯಾನರ್ಜಿ

ಕೊಲ್ಕತಾ : ಪ್ರಧಾನಿ ನರೇಂದ್ರ ಮೋದಿ ದೇಶದ ಅತಿ ದೊಡ್ಡ ಗಲಭೆಕೋರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಗಾರಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸಹಾಗಂಜ್ ನಲ್ಲಿ ಬುಧವಾರ ನಡೆದ ಸಮಾವೇಶವೊಂದರಲ್ಲಿ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ನರೇಂದ್ರ ಮೋದಿ ದೇಶದ ಅತಿದೊಡ್ಡ ಗಲಭೆಕೋರ. ಅಮೆರಿಕ ಅಧ್ಯಕ್ಷ ದೊನಾಲ್ಡ್ ಟ್ರಂಪ್ ಪರಿಸ್ಥಿತಿ ಏನಾಯಿತು? ಮೋದಿ ಕೂಡ ಟ್ರಂಪ್ ಗಿಂತಲೂ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ. ಮೋದಿ ಮತ್ತು ಅಮಿತ್ ಶಾ ದೇಶದಲ್ಲಿ ಸುಳ್ಳು ಮತ್ತು ದ್ವೇಷವನ್ನು ಹಬ್ಬುವ ಕಾರ್ಯದಲ್ಲಿ ತೊಡಗಿದ್ದಾರೆ. ಹಿಂಸಾಚಾರದಿಂದ ಯಾವುದೇ ಲಾಭ ಪಡೆಯಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದರು.

“ವಿಧಾನಸಭಾ ಚುನಾವಣೆಯಲ್ಲಿ ನಾನು ಗೋಲ್ ಕೀಪರ್ ಆಗಿರುತ್ತೇನೆ. ನೀವು (ಬಿಜೆಪಿ) ಒಂದೇ ಒಂದು ಗೋಲು ಹೊಡೆಯಲು ಸಾಧ್ಯವಿಲ್ಲ. ಫುಟ್ಬಾಲ್ ನಲ್ಲಿ ಎಲ್ಲಾ ಶಾಟ್ ಗಳು ಗೋಲ್ ಪೋಸ್ಟ್ ಮೇಲೆ ಹೋದಂತೆ ನಿಮ್ಮ ಪರಿಸ್ಥಿತಿಯೂ ಆಗುತ್ತದೆ” ಎಂದು ಅವರು ವ್ಯಂಗ್ಯವಾಡಿದರು.

ಕ್ರಿಕೆಟ್ ಆಟಗಾರ ಮನೋಜ್ ತಿವಾರಿ ಮತ್ತು ಹಲವು ಬಂಗಾಳಿ ನಟರು ಸಮಾವೇಶದಲ್ಲಿ ಟಿಎಂಸಿ ಸೇರಿದರು.

Join Whatsapp
Exit mobile version