Home ಟಾಪ್ ಸುದ್ದಿಗಳು ಬಿಹಾರ | ಅಕ್ರಮ ಶಸ್ತ್ರಾಸ್ತ್ರ ಮಾಫಿಯಾ ತನಿಖೆಗೆ ತೆರಳಿದ ಪೊಲೀಸರ ಮೇಲೆಯೇ ದಾಳಿ; ಇನ್ಸ್ ಪೆಕ್ಟರ್...

ಬಿಹಾರ | ಅಕ್ರಮ ಶಸ್ತ್ರಾಸ್ತ್ರ ಮಾಫಿಯಾ ತನಿಖೆಗೆ ತೆರಳಿದ ಪೊಲೀಸರ ಮೇಲೆಯೇ ದಾಳಿ; ಇನ್ಸ್ ಪೆಕ್ಟರ್ ಬಲಿ

ಪಾಟ್ನಾ : ಅಕ್ರಮ ಶಸ್ತ್ರಾಸ್ತ್ರದ ತಪಾಸಣೆಗೆ ತೆರಳಿದ್ದ ಪೊಲೀಸರ ಮೇಲೆಯೇ ದುಷ್ಕರ್ಮಿಗಳ ಗುಂಪು ಗುಂಡಿನ ದಾಳಿ ನಡೆಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಹಾಡಹಗಲೇ ನಡೆದ ಘಟನೆಯಲ್ಲಿ ಇನ್ಸ್ ಪೆಕ್ಟರ್ ಒಬ್ಬರು ಬಲಿಯಾಗಿದ್ದು, ಹಲವರಿಗೆ ಗಾಯಗಳಾಗಿವೆ.

ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಬ್ ಇನ್ಸ್ ಪೆಕ್ಟರ್ ದಿನೇಶ್ ಶಾ ಮೃತಪಟ್ಟಿದ್ದಾರೆ.  ಹಲವು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಅಕ್ರಮ ಮದ್ಯ, ಶಸ್ತ್ರಾಸ್ತ್ರ ಸಾಗಾಣಿಕೆ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಪತ್ತೆ ಹಚ್ಚಲು ತೆರಳಿದ್ದವ ವೇಳೆ ಪೊಲೀಸರ ಮೇಲೆಯೇ ದಾಳಿ ಮಾಡಲಾಗಿದೆ.

ಆರೋಪಿಗಳ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿದ್ದಾರೆ.

Join Whatsapp
Exit mobile version