Home ಟಾಪ್ ಸುದ್ದಿಗಳು ರಾಮಮಂದಿರ ಉದ್ಘಾಟನಾ ದಿನ ರಾಜ್ಯದಲ್ಲಿ ಏಕ್ಯತಾ ಯಾತ್ರೆ ಆಯೋಜಿಸಿದ ಮಮತಾ ಬ್ಯಾನರ್ಜಿ

ರಾಮಮಂದಿರ ಉದ್ಘಾಟನಾ ದಿನ ರಾಜ್ಯದಲ್ಲಿ ಏಕ್ಯತಾ ಯಾತ್ರೆ ಆಯೋಜಿಸಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಅದೇ ದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ‘ಏಕ್ಯತಾ ಯಾತ್ರೆ’ ಕಾರ್ಯಕ್ರಮಕ್ಕೆ ಆಯೋಜಿಸಿ ರಾಜ್ಯದ ಜನರು ಭಾಗವಹಿಸಲು ಕರೆ ನೀಡಿದ್ದಾರೆ.

ಸೋಮವಾರ 22 ರಂದು ಮಧ್ಯಾಹ್ನ 3 ಗಂಟೆಗೆ ಕಾಳಿಘಾಟ್‌ನಲ್ಲಿ ಮಮತಾ ಬ್ಯಾನರ್ಜಿ ಪೂಜೆ ಸಲ್ಲಿಸಲಿ ಬಳಿಕಹಜ್ರಾದಿಂದ ಐಕ್ಯತಾ ಯಾತ್ರೆ ಆರಂಭವಾಗಲಿದೆ.

ಆ ಬಳಿಕ ಮುಖ್ಯಮಂತ್ರಿಗಳು ಗಾರ್ಚಾ ರಸ್ತೆಯಲ್ಲಿರುವ ಹಜ್ರಾ ಕಾನೂನು ಕಾಲೇಜು ಎದುರಿನ ಗುರುದ್ವಾರಕ್ಕೆ ತೆರಳಿ, ಅಲ್ಲಿಂದ ಪಾರ್ಕ್ ಸರ್ಕಸ್ ತಲುಪಿದ ಬಳಿಕ ಮಸೀದಿಗೆ ತೆರಳಲಿದ್ದಾರೆ

ಅಲ್ಲಿಂದ ಮುಂದೆ ಇರುವ ಚರ್ಚ್‌ಗೆ ಹೋಗಲಿರುವ ಮಮತಾ ಬ್ಯಾನರ್ಜಿ ನಂತರ ಪಾರ್ಕ್ ಸರ್ಕಸ್ ನಲ್ಲಿಯೇ ಸಭೆ ನಡೆಯಲಿದೆ. ವೇದಿಕೆಯಲ್ಲಿ ಮುಖ್ಯಮಂತ್ರಿ ಜತೆ ಎಲ್ಲ ಧಾರ್ಮಿಕ ಮುಖಂಡರು ಇರುತ್ತಾರೆ.

ಈ ಐಕ್ಯತಾ ಮೆರವಣಿಗೆಯನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಲ್ಕತ್ತಾ ಹೈಕೋರ್ಟ್‌ಗೆ ಹೋಗಿದ್ದರು.

ಗುರುವಾರ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಷರತ್ತುಗಳಿಗೆ ಒಳಪಟ್ಟು ಈ ಒಗ್ಗಟ್ಟಿನ ಯಾತ್ರೆ ಕೈಗೊಳ್ಳಬಹುದು ಎಂದು ಕೋರ್ಟ್ ಆದೇಶ ನೀಡಿದೆ.

Join Whatsapp
Exit mobile version