Home ಟಾಪ್ ಸುದ್ದಿಗಳು ಮಾಲೆಗಾಂವ್ ಸ್ಫೋಟ ಆರೋಪಿ, ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅನಾರೋಗ್ಯದ ನೆಪವೊಡ್ಡಿ ವಿಚಾರಣೆಗೆ ಗೈರು

ಮಾಲೆಗಾಂವ್ ಸ್ಫೋಟ ಆರೋಪಿ, ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅನಾರೋಗ್ಯದ ನೆಪವೊಡ್ಡಿ ವಿಚಾರಣೆಗೆ ಗೈರು

ನವದೆಹಲಿ : ಮಾಲೆಗಾಂವ್ ಬಾಂಬ್ ಸ್ಫೋಟ ಆರೋಪಿ, ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅನಾರೋಗ್ಯ ಕಾರಣಗಳಿಂದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯ ವೇಳೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಇತರ ಆರೋಪಿಗಳು ಖುದ್ದಾಗಿ ಹಾಜರಿರುವಂತೆ ನ್ಯಾಯಾಲಯ ಆದೇಶಿಸಿತ್ತು. ಎನ್ ಐಎ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಹೊಸದಾಗಿ ನೇಮಕಗೊಂಡಿರುವ ನ್ಯಾಯಾಧೀಶ ಪಿ.ಆರ್. ಸಿಂಟ್ರೆ ವಿಚಾರಣೆ ನಡೆಸಲಿದ್ದಾರೆ.

ಮೂವರು ಆರೋಪಿಗಳು ಮಾತ್ರವೇ ಹಾಜರಾಗಿದ್ದು, ಆರೋಪಿಗಳಾದ ಪ್ರಗ್ಯಾ ಸಿಂಗ್, ರಮೇಶ್ ಉಪಾಧ್ಯಾಯ, ಸುಧಾಕರ್ ದ್ವಿವೇದಿ ಮತ್ತು ಸುಧಾಕರ್ ಚತುರ್ವೇದಿ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.

ಭಯೋತ್ಪಾದಕ ಕೃತ್ಯದ ಆರೋಪದಲ್ಲಿ ಜೈಲಿನಲ್ಲಿದ್ದು, ವಿಚಾರಣೆ ಎದುರಿಸಿದ್ದರೂ ಪ್ರಗ್ಯಾ ಸಿಂಗ್ ಠಾಕೂರು ಅವರನ್ನು ಬಿಜೆಪಿ ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು. ಅಲ್ಲಿ ಅವರು ಗೆದ್ದು ಈಗ ಬಿಜೆಪಿ ಸಂಸದೆಯೂ ಆಗಿದ್ದಾರೆ.

Join Whatsapp
Exit mobile version