ಕೊಚ್ಚಿನ್: ಮಲಯಾಳಂ ಚಿತ್ರನಟ ಪ್ರದೀಪ್ ಕೊಟ್ಟಾಯಂ (61) ಹೃದಯಾಘಾತದಿಂದ ಗುರುವಾರ ಮುಂಜಾನೆ 4.15ಕ್ಕೆ ನಿಧನರಾದರು.
ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಅವರು ನಟಿಸಿದ್ದರು. ಸಹಜ ಹಾಸ್ಯದಿಂದ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. 2001ರಲ್ಲಿ ಐವಿ ಸಸಿ ಅವರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.
‘ವಿನ್ನೈತ್ತಾಂಡಿ ವರುವಯ್ಯ’ ಚಿತ್ರದ ಪಾತ್ರ ಅವರಿಗೆ ವಿಶೇಷ ಜನಮನ್ನಣೆ ಗಳಿಸಿಕೊಟ್ಟಿತ್ತು.