Home ಕರಾವಳಿ ಮಳಲಿ ಮಸೀದಿ ವಿಚಾರ;ಸಮೀಕ್ಷೆಗೆ ಕೋರ್ಟ್‌ ಕಮಿಷನರ್‌ ನೇಮಿಸಲು ಮನವಿ, ಇಂದು ವಿಚಾರಣೆ

ಮಳಲಿ ಮಸೀದಿ ವಿಚಾರ;ಸಮೀಕ್ಷೆಗೆ ಕೋರ್ಟ್‌ ಕಮಿಷನರ್‌ ನೇಮಿಸಲು ಮನವಿ, ಇಂದು ವಿಚಾರಣೆ

ಮಂಗಳೂರು: ಮಳಲಿ ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಹೋಲುವ ರಚನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಲ್ಲಿ ಪುರಾತತ್ವ ಇಲಾಖೆಯ ನೆರವಿನೊಂದಿಗೆ ಸಮೀಕ್ಷೆ ನಡೆಸಲು “ಕೋರ್ಟ್‌ ಕಮಿಷನರ್‌’ ನೇಮಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.

ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ವಿಶ್ವ ಹಿಂದೂ ಪರಿಷತ್‌ ಪರ ವಕೀಲರು ಸರ್ವೆಗೆ ‘ಕೋರ್ಟ್‌ ಕಮಿಷನರ್‌’ ನೇಮಿಸುವಂತೆ ಮನವಿ ಮಾಡಿದರು.

ಜ್ಞಾನವಾಪಿ ಮಸೀದಿಯ ವಿಚಾರವನ್ನು ಕೂಡ ಹಿಂದುತ್ವ ಪರ ವಕೀಲರು ತಮ್ಮ ವಾದದದಲ್ಲಿ ಸವಿಸ್ತಾರವಾಗಿ ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಳಲಿ ಮಸೀದಿ ಪರ ವಕೀಲರು ಮಸೀದಿಗೆ ನೂರಾರು ವರ್ಷಗಳ ಇತಿಹಾಸವಿದೆ. ಮಸೀದಿ ನವೀಕರಣಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಇಂದು ವಿಚಾರಣೆ ನಡೆಯಲಿದೆ.

Join Whatsapp
Exit mobile version