Home ಟಾಪ್ ಸುದ್ದಿಗಳು ಫೇಸ್ಬುಕ್ ಪ್ರೀತಿ : ಬಾಂಗ್ಲಾದಿಂದ ಭಾರತಕ್ಕೆ ಈಜಿಕೊಂಡೇ ಬಂದ ಯುವತಿ ಈಗ ಪೊಲೀಸ್ ಅತಿಥಿ

ಫೇಸ್ಬುಕ್ ಪ್ರೀತಿ : ಬಾಂಗ್ಲಾದಿಂದ ಭಾರತಕ್ಕೆ ಈಜಿಕೊಂಡೇ ಬಂದ ಯುವತಿ ಈಗ ಪೊಲೀಸ್ ಅತಿಥಿ

ನವದೆಹಲಿ: ; ಭಾರತದ ಯುವಕನೊಂದಿಗೆ ಫೇಸ್ ಬುಕ್ ನಲ್ಲಿ ಪ್ರೀತಿ ಚಿಗುರಿ ಆತನನ್ನು ಭೇಟಿಯಾಗಲು ಭಾರತಕ್ಕೆ ಈಜಿಕೊಂಡೇ ಬಂದ ಯುವತಿಯೊಬ್ಬಳು ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಬಾಂಗ್ಲಾ ಮೂಲದ ಕೃಷ್ಣ ಮಂಡಲ್ ಎಂಬ ಯುವತಿಗೆ ಫೇಸ್‌ಬುಕ್‌ನಲ್ಲಿ ಭಾರತದ ಅಭಿಕ್ ಮಂಡಲ್ ಎಂಬ ಯುವಕನನ್ನು ಪರಿಚಯವಾಗಿದ್ದು ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಅವಳ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಅಕ್ರಮವಾಗಿ ಗಡಿ ದಾಟಲು ನಿರ್ಧರಿಸಿದ್ದಾಳೆ. ಪೊಲೀಸ್ ಮೂಲಗಳ ಪ್ರಕಾರ, ಯುವತಿ ಮೊದಲು ರಾಯಲ್ ಬೆಂಗಾಲ್ ಟೈಗರ್ಸ್‌ಗೆ ಹೆಸರುವಾಸಿಯಾದ ಸುಂದರಬನ್ಸ್‌ ಪ್ರವೇಶಿಸಿ, ನಂತರ ನದಿಯಲ್ಲಿ ಸುಮಾರು ಒಂದು ಗಂಟೆ ಈಜಿದ್ದಾಳೆ ಎನ್ನಲಾಗುತ್ತಿದೆ.

ಇದಾದ ಮೂರು ದಿನಗಳ ನಂತರ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಕೃಷ್ಣ ಅಭಿಕ್ ಅವರ ವಿವಾಹ ನಡೆದಿದೆ. ಆದರೆ, ಅಕ್ರಮವಾಗಿ ದೇಶ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಿದ್ದಾರೆ.

Join Whatsapp
Exit mobile version