Home ಜಾಲತಾಣದಿಂದ ಪ್ರೌಢಶಾಲೆಯನ್ನು ಪದವಿ ಪೂರ್ವ ಕಾಲೇಜು ಮಾಡಿ : ಮುಖ್ಯಮಂತ್ರಿಗೆ ಹರೇಕಳ ಹಾಜಬ್ಬ ಮನವಿ

ಪ್ರೌಢಶಾಲೆಯನ್ನು ಪದವಿ ಪೂರ್ವ ಕಾಲೇಜು ಮಾಡಿ : ಮುಖ್ಯಮಂತ್ರಿಗೆ ಹರೇಕಳ ಹಾಜಬ್ಬ ಮನವಿ

ಬೆಂಗಳೂರು: ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಇಂದು(ಶನಿವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಂಗಳೂರು ತಾಲೂಕಿನ ಹರೇಕಳ ನ್ಯೂಪಡ್ಪುವಿನ ಸರ್ಕಾರಿ ಪ್ರೌಢಶಾಲೆಯನ್ನು ಪದವಿ ಪೂರ್ವ ಕಾಲೇಜಿಗೆ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದರು.

‘ಅಕ್ಷರ ಸಂತ’ ಎಂದೇ ಗುರುತಿಸಿಕೊಂಡಿರುವ ಹರೇಕಳ ಹಾಜಬ್ಬ ಅವರು ಕಿತ್ತಳೆ ಹಣ್ಣಿನ ಬುಟ್ಟಿ ಹೊತ್ತು ಬೀದಿ ಬೀದಿ ತಿರುಗುತ್ತಲೇ, ತಮ್ಮ ಊರಿನ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂಬ ಕಾರಣಕ್ಕೆ ಶಾಲೆ ಕಟ್ಟಿದ್ದಾರೆ.

ಮಂಗಳೂರು ತಾಲ್ಲೂಕು ಹರೇಕಳ ಗ್ರಾಮದ ನ್ಯೂಪಡ್ಪುವಿನ ಮದ್ರಸಾ ಒಂದರಲ್ಲಿ 1999ರಲ್ಲಿ ಶಾಲೆ ಆರಂಭಿಸಿದ ಹಾಜಬ್ಬ ಅವರು ಕಿತ್ತಳೆ ಮಾರುತ್ತಲೇ ಶಾಲೆಗೆ ಅಗತ್ಯವಾದ ಸಹಾಯಧನ ಯಾಚಿಸಿ ಸಂಗ್ರಹಿಸಿದ್ದಾರೆ.

Join Whatsapp
Exit mobile version