Home ಟಾಪ್ ಸುದ್ದಿಗಳು ಪ್ರತಾಪ್ ಸಿಂಹಗೆ ಆಸೆ ಇದ್ದರೇ ಇನ್ನೊಂದು ಮದುವೆಯಾಗಿ ಅನುಭವ ನಮಗೆ ಹೇಳಲಿ: ತನ್ವೀರ್ ಸೇಠ್

ಪ್ರತಾಪ್ ಸಿಂಹಗೆ ಆಸೆ ಇದ್ದರೇ ಇನ್ನೊಂದು ಮದುವೆಯಾಗಿ ಅನುಭವ ನಮಗೆ ಹೇಳಲಿ: ತನ್ವೀರ್ ಸೇಠ್

ಮೈಸೂರು: ಮುಸ್ಲಿಮರಿಗೆ 2-3 ಜನ ಪತ್ನಿಯರಿದ್ದರೇ ಗೃಹಲಕ್ಷ್ಮೀ ಯೋಜನೆಯಲ್ಲಿ ಯಜಮಾನಿಯನ್ನು ಹೇಗೆ ಗುರುತಿಸುತ್ತೀರಾ? ಎಂಬ ಸಂಸದ ಪ್ರತಾಪ್ ಸಿಂಹ  ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.

ಪ್ರತಾಪ್ ಸಿಂಹ ಅವರಿಗೆ ಆಸೆ ಇದ್ದರೇ ಇನ್ನೊಂದು ಮದುವೆ ಆಗಲಿ. ಅದರ ಅನುಭವವನ್ನು ನಮಗೆ ಹೇಳಲಿ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ಸಂಪುಟ ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂದು ಗೊತ್ತಿಲ್ಲ. ಮುಂದೆ ಸದನದಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ಉತ್ತರಿಸುತ್ತೇನೆ ಎಂದು ಮೈಸೂರಿನಲ್ಲಿ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಕೋಮು ಗಲಭೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಿದ ವಿಚಾರವಾಗಿ ಮಾತನಾಡಿದ ಅವರು ತಲಾ 25 ಲಕ್ಷ ರೂ. ಪರಿಹಾರ ನೀಡಿದ್ದಕ್ಕೆ ಸಹಮತವಿದೆ. ಹಿಂದಿನ ಬಿಜೆಪಿ ಸರ್ಕಾರ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿತ್ತು. ಬಿಜೆಪಿ ಸರ್ಕಾರ ಮಾಡಿದ್ದ ತಪ್ಪನ್ನು ಕಾಂಗ್ರೆಸ್ ಸರ್ಕಾರ ಸರಿಪಡಿಸಿದೆ ಎಂದರು.

Join Whatsapp
Exit mobile version