Home ಕರಾವಳಿ ಮಂಗಳೂರಿನಲ್ಲಿ ಸರಳವಾಗಿ ಮಹಾವೀರ ಜಯಂತಿ ಆಚರಣೆ

ಮಂಗಳೂರಿನಲ್ಲಿ ಸರಳವಾಗಿ ಮಹಾವೀರ ಜಯಂತಿ ಆಚರಣೆ

ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಭಗವಾನ್ ಮಹಾವೀರ ಜಯಂತಿಯನ್ನು ನಗರದ ತುಳು ಭವನದಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್ ಅವರು ಮಹಾವೀರರ ಪಂಚತತ್ವಗಳಾದ ಅಹಿಂಸಾ, ಸತ್ಯ, ಆಸ್ತೇಯ, ಬ್ರಹ್ಮಚಾರ್ಯ, ಅಪರಿಗ್ರಹ ಆಧ್ಯಾತ್ಮಿಕ ಹಾಗೂ ಲೌಕಿಕ ಸಾಧನೆಗೆ ಅತೀ ಅಗತ್ಯ, ಪ್ರಸ್ತುತ ಜಗತ್ತಿನ ಪರಿಸ್ಥಿತಿಗೆ ಅವರ ತತ್ವಗಳು ಪರಿಹಾರವಾಗಬಲ್ಲದು ಎಂದು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.


ಕರ್ನಾಟಕ ರಾಜ್ಯ ಜೈನ್ ಮಿಲನ್ ನ ರಾಜ್ಯಾಧ್ಯಕ್ಷ ಪುಪ್ಪರಾಜ ಜೈನ್, ದ.ಕ. ಜಿಲ್ಲಾ ಜೈನ್ ಮಿಲನ್ ಅಧ್ಯಕ್ಷ
ರತ್ನಾಕರ ಜೈನ್, ಪ್ರಮೋದ್ ಕುಮಾರ್ ಜೈನ್, ಮಹಾವೀರ ಜೈನ್ ಹಾಗೂ ಜೈನ್ ಸಮುದಾಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್. ಜಿ ಸ್ವಾಗತಿಸಿದರು.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಭಗವಾನ್ ಮಹಾವೀರರ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.

Join Whatsapp
Exit mobile version