ಚಂದ್ರಾಪುರ: ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಯ 14 ವಿವಾದಿತ ಗ್ರಾಮಗಳಲ್ಲಿ ವಾಸಿಸುವ ಜನರು ಎರಡೂ ರಾಜ್ಯಗಳು ಜಾರಿಗೊಳಿಸುವ ಸವಲತ್ತುಗಳನ್ನು ಪಡೆಯುತ್ತಿದ್ದಾರೆ.
ಈ 14 ಗ್ರಾಮಗಳೂ ಮಹಾರಾಷ್ಟ್ರದ ನಕ್ಷೆಯ ಪ್ರಕಾರ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಜಿವಾಟಿ ತಾಲ್ಲೂಕಿನಲ್ಲಿವೆ. ರಾಜಕೀಯ ಸ್ಥಾನಮಾನ, ಮೂಲಸೌಕರ್ಯ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ಇಲ್ಲಿನ ಗ್ರಾಮಸ್ಥರು ಎರಡೂ ರಾಜ್ಯಗಳಿಂದಲೂ ಪಡೆಯುತ್ತಿದ್ದಾರೆ.
‘ಈ ಗ್ರಾಮಗಳು ತಮ್ಮ ಪ್ರದೇಶದಲ್ಲಿವೆ ಎಂದು ಹಿಂದೆ ಆಂಧ್ರಪ್ರದೇಶ, ವಿಭಜನೆಯ ನಂತರ ತೆಲಂಗಾಣವು ಪ್ರತಿಪಾದಿಸುತ್ತಿದೆ. ಈ ವಿವಾದವು ಇನ್ನೂ ಬಗೆಹರಿದಿಲ್ಲ ಎನ್ನಲಾಗುತ್ತಿದೆ.