Home ಟಾಪ್ ಸುದ್ದಿಗಳು ಮಹಾರಾಷ್ಟ್ರ: 4.1 ತೀವ್ರತೆಯ ಭೂಕಂಪನ!

ಮಹಾರಾಷ್ಟ್ರ: 4.1 ತೀವ್ರತೆಯ ಭೂಕಂಪನ!

ಪಾಲ್ಘರ್ ಜಿಲ್ಲೆ: ಹಾರಾಷ್ಟ್ರದ ಕರಾವಳಿ ಪಾಲ್ಘರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 4.1 ತೀವ್ರತೆಯ ಪ್ರಬಲ ಭೂಕಂಪನ ದಾಖಲಾಗಿದೆ. ಅದೃಷ್ಟವಶಾತ್ ಭೂಕಂಪನದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ರಾತ್ರಿ 9.52ಕ್ಕೆ ಕರಾವಳಿಯಿಂದ 10 ಕಿ.ಮೀ. ಆಳದಲ್ಲಿ ಕಂಪನ ಕೇಂದ್ರಿಕೃತವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿವೇಕಾನಂದ ಕದಂ ಮಾಹಿತಿ ನೀಡಿದ್ದಾರೆ. ಈ ವಾರದ ಆರಂಭದಲ್ಲಿ ಇದೇ ಜಿಲ್ಲೆಯ ಜಿಲ್ಲೆಯ ತಲಸರಿ ಪ್ರದೇಶದಲ್ಲಿ ಕಂಪನದ ಅನುಭವವಾಗಿತ್ತು.

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಬಳಿಯೂ ಭೂಕಂಪನ‌ ವರದಿಯಾಗಿದ್ದು, 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನ ವಿವಿಧ ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ.

Join Whatsapp
Exit mobile version